ಕಾರ್ಕಳ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿಯಾಗಿ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ಅಜೆಕಾರು ಕೈಕಂಬ ಬಳಿ ಸಂಭವಿಸಿದೆ. ಅಜೆಕಾರು ನಿವಾಸಿ ಜಯಲಕ್ಷಿö್ಮÃ (55) ಎಂಬವರು ಗಾಯಗೊಂಡ ಮಹಿಳೆ.
ರಾಘವೇಂದ್ರ ನಾಯಕ್ ಎಂಬವರು ಗುರುವಾರ ಸಂಜೆ 7 ಗಂಟೆ ಸುಮಾರಿಗೆ ತಮ್ಮ ಬೈಕಿನಲ್ಲಿ ಹೋಗುತ್ತಿದ್ದಾಗ ಜಯಲಕ್ಷಿö್ಮÃ ಅವರು ಮನೆಗೆಲಸ ಮುಗಿಸಿ ವಾಪಾಸು ತನ್ನ ಮನೆಯತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕ್ ಸವಾರ ರಾಘವೇಂದ್ರ ಅವರು ಕೂಡ ಗಾಯಗೊಂಡು ಕಾರ್ಕಳ ಖಾಸಗಿ ಆಸ್ಪತೆಗೆ ದಾಖಲಾಗಿದ್ದಾರೆ.
