Share this news

ಸನಾ: ಯೆಮೆನ್ ದೇಶದ ಅಲ್ ಖೈದಾ ಶಾಖೆಯ ಪ್ರಮುಖ ನಾಯಕ ಅಲ್-ಬತರ್ಫಿ ನಿಗೂಢವಾಗಿ ಮೃತಪಟ್ಟಿದ್ದಾನೆ ಎಂದು ಉಗ್ರಗಾಮಿ ಸಂಘಟನೆ ಭಾನುವಾರ ತಡರಾತ್ರಿ ಘೋಷಿಸಿದೆ.

ಒಸಾಮಾ ಬಿನ್ ಲಾಡೆನ್ ಹತ್ಯೆಯ ನಂತರವೂ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿ ಗುಂಪಿನ ಅತ್ಯಂತ ಅಪಾಯಕಾರಿ ಶಾಖೆ ಎಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟಿರುವ ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಅಲ್-ಖೈದಾ ಗುಂಪನ್ನು ಮುನ್ನಡೆಸಿದ್ದಕ್ಕಾಗಿ ಖಾಲಿದ್ ಅಲ್-ಬತರ್ಫಿ ತಲೆಗೆ ಅಮೆರಿಕ ಸರ್ಕಾರವು 5 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿತ್ತು. ಅಲ್-ಖೈದಾ ಕಪ್ಪು-ಬಿಳುಪು ಧ್ವಜದ ಕವರ್ ನಲ್ಲಿ ಸುತ್ತಿದ ಅಲ್-ಬತರ್ಫಿಯ ದೇಹವನ್ನು ತೋರಿಸುವ ವೀಡಿಯೊವನ್ನು ಅಲ್-ಖೈದಾ ಬಿಡುಗಡೆ ಮಾಡಿದೆ ಎಂದು ಅಮೆರಿಕನ್ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈ ನಡುವೆ ಸಂಘಟನೆಯು ಆತನ ಸಾವಿಗೆ ಕಾರಣದ ಏನೆಂಬುವುದರ ಕುರಿತು ಯಾವುದೇ ವಿವರಗಳನ್ನು ನೀಡಿಲ್ಲ.

ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.

Village Accountant Recruitment 2024: Apply Now For 1000 Village Accountant (VA) Vacancies Through Karnataka Revenue Department

Leave a Reply

Your email address will not be published. Required fields are marked *