ಕಾರ್ಕಳ: ಅಧಿಕಾರ ದುರುಪಯೋಗ ಹಾಗೂ ಹಣ ದುರುಪಯೋಗದ ಆರೋಪದಲ್ಲಿ ಬೋಳ ಬಿ. ಸದಾಶಿವ ಶೆಟ್ಟಿ ಅವರನ್ನು ಬೋಳ ವ್ಯವಸಾಯ ಸೇವಾ ಸಂಘದ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿದೆ.
ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕುಂದಾಪುರ ಉಪವಿಭಾಗ, ಕುಂದಾಪುರ ಇವರ ಕಛೇರಿ ನಡವಳಿಯಂತೆ ಬೋಳ ಬಿ. ಸದಾಶಿವ ಶೆಟ್ಟಿ ಇವರನ್ನು ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ 1959ರ ಪ್ರಕರಣ 29ಸಿ(8)(ಬಿ) ರೀತ್ಯಾ ಅನರ್ಹತೆಗೆ ಒಳಗಾಗಿರುವುದರಿಂದ ಕಾಯ್ದೆ ಕಲಂ 29ಸಿ(8) (ಡಿ) ಪ್ರಕಾರ ಮಂಡಳಿ ಸದಸ್ಯತ್ವದಿಂದ ಅನರ್ಹಗೊಳಿಸಿ ವಜಾ ಮಾಡಿರುತ್ತಾರೆ ಮತ್ತು ಕಲಂ 292 (10)ರ ಪ್ರಕಾರ ಈ ಸಂಘಕ್ಕೆ ಮತ್ತು ಇನ್ನಾವುದೇ ಸಹಕಾರಿ ಸಂಘದಲ್ಲಿ ಮುಂದಿನ 5 ವರ್ಷಗಳವರೆಗೆ ಚುನಾವಣೆಯಲ್ಲಿ ಆಯ್ಕೆಯಾಗಲು ಅಥವಾ ನೇಮಕವಾಗಲು ಅನರ್ಹಗೊಳಿಸಿ ಆದೇಶಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.