ಹೆಬ್ರಿ : ತಾಲೂಕಿನ ಮುನಿಯಾಲು ಮಾರಿಗುಡಿಯಲ್ಲಿ ಮಂಗಳವಾರ ಹಾಡುಹಗಲೇ ವ್ಯಕ್ತಿಯೊಬ್ಬ ಕಾಣಿಕೆ ಡಬ್ಬಿ ಕಳ್ಳತನಕ್ಕೆ ಯತ್ನಿಸಿದ್ದು, ಪ್ರಕರಣ ದಾಖಲಾಗಿದೆ.
ವಿಘ್ನೇಶ್ವರ ಅವರು ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದು ಮಂಗಳವಾರ ಮಾರಿಗುಡಿಯಲ್ಲಿ ವಿಶೇಷ ಪೂಜೆ ಇರುವ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ದೇವಸ್ಥಾನದ ಯಾಗ ಮಂಟಪದ ಬಳಿ ಇದ್ದ ಸ್ಟೀಲ್ ಕಾಣಿಕೆ ಡಬ್ಬಿಯ ಚಿಲಕ ಹಾಗೂ ಬೀಗದ ಕೊಂಡಿಯನ್ನು ಮೀಟಿ ತೆಗೆದು ಕಾಣಿಕೆ ಡಬ್ಬಿಯಲ್ಲಿರುವ ಹಣವನ್ನು ಕಳವು ಮಾಡಲು ಯತ್ನಿಸುತ್ತಿದ್ದ. ಇದನ್ನು ಗಮನಿಸಿದ ಅರ್ಚಕರು ಆತನನ್ನು ಹಿಡಿದು ವಿಚಾರಿಸಿದಾಗ ಆತ ತನ್ನ ಹೆಸರು ರಾಘವೇಂದ್ರ ಎಂದು ತಿಳಿಸಿದ್ದು ವಿಪರೀತ ಮದ್ಯಪಾನ ಮಾಡಿದ್ದ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.