ಕಾರ್ಕಳ: ದೊಂಡೇರಂಗಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಸಂಘದ 16ನೇ ವರ್ಷದ ವಾರ್ಷಿಕೋತ್ಸವವು ದೊಂಡೇರಂಗಡಿಯಲ್ಲಿ ನಡೆಯಿತು.
ಮುಳ್ಕಾಡು ಶಾಲೆಯ ಮುಖ್ಯೋಪಾಧ್ಯಾಯ ಜನಾರ್ದನ ಬೆಳಿರಾಯ ಕಾರ್ಯಕ್ರಮ ಉದ್ಘಾಟಿಸಿದರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಉದಯ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದರು.
ಕಡ್ತಲ ಪಂಚಾಯತ್ ಅಧ್ಯಕ್ಷ ಸುಕೇಶ್ ಹೆಗ್ಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಲಕ್ಷ್ಮೀ ದಿನೇಶ್ ಪೂಜಾರಿ ,ರತ್ನಾಕರ್ ಅಮೀನ್,ದಿನೇಶ್ ಕಿಣಿ,ರಾಘವ ,ವಿಕಾಸ್ ಹೆಗ್ಡೆ,ಗಿರೀಶ್ ನಾಯಕ್,ಜೀವನ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು. ಸಂಘದ ಯಕ್ಷಶಿಕ್ಷಣದ ಗುರುಗಳಾದ ಮನೋಜ್ ಹೇರೂರು ಮತ್ತು ಪ್ರಸಂಗ ನಿರ್ದೇಶಕ ಪ್ರಜ್ವಲ್ ಶೇರಿಗಾರ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಸಂಘದ ಯಕ್ಷಶಿಕ್ಷಣದ ಶಿಕ್ಷಾರ್ಥಿಗಳಿಂದ ಚಕ್ರವ್ಯೂಹ ಎನ್ನುವ ಪೌರಾಣಿಕ ಪ್ರಸಂಗವು ಪ್ರದರ್ಶನಗೊಂಡಿತು.
ಸಂಘದ ಅಧ್ಯಕ್ಷ ಹರೀಶ್ ದುಗ್ಗನ್ ಬೆಟ್ಟು ಸ್ವಾಗತಿಸಿ, ದೀಪಕ್ ಕಾಮತ್ ವಂದಿಸಿದರು.ಶಂಕರ್ ನಾಯ್ಕ್ ಮತ್ತು ಕುಕ್ಕುಜೆ ವಿನಯ ಆರ್ ಭಟ್ ನಿರೂಪಿಸಿದರು. ಬಳಿಕ ಸಂಘದ ಕಲಾವಿದರಿಂದ ಪಾಪಣ್ಣ ವಿಜಯ ಗುಣ ಸುಂದರಿ ಎನ್ನುವ ತುಳು ಕಥಾನಕವು ಪ್ರದರ್ಶನಗೊಂಡಿತು.