ಮಂಗಳೂರು: ಮರಾಠಿ ಸಮಾಜ ಸೇವಾ ಸಂಘ(ರಿ) ಗಂಜಿಮಠ ಮಂಗಳೂರು ಇದರ 4ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,ವಾರ್ಷಿಕ ಮಹಾಸಭೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರ ಹಾಗೂ ವೈದ್ಯಕೀಯ ನೆರವು ವಿತರಣಾ ಕಾರ್ಯಕ್ರಮವು ಗಂಜಿಮಠದ ಮರಾಠಿ ಸಮಾಜ ಮಂದಿರಲ್ಲಿ ಮೇ 12ರಂದು ನಡೆಯಿತು.
ಕೃಷ್ಣ ಭಟ್ ಕುಪ್ಪೆಪದವು ಇವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ವೃತ, ಕಾರ್ಕಳದ ರಾಘವೇಂದ್ರ ಭಜನಾ ಮಂಡಳಿಯವರಿಂದ ದಾಸ ಸಾಹಿತ್ಯ-ಭಕ್ತಿ ಗಾನ ಸೌರಭ ಜರುಗಿತು.
ಸಂಘದ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ,ಪ್ರತಿಭಾ ಪುರಸ್ಕಾರ ಸಮಾರಂಭವು ಸಂಘದ ಅಧ್ಯಕ್ಷ ಶೇಖರ ಕಡ್ತಲ ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಚೆನ್ನೈ ಇದರ ಸಹಾಯಕ ಮುಖ್ಯ ವ್ಯವಸ್ಥಾಪಕ ಸುಂದರ ನಾಯ್ಕ್ ಮಾತನಾಡಿ, ಸಂಘ-ಸಂಸ್ಥೆಗಳನ್ನು ರಚಿಸಿಕೊಂಡು ಸಂಘಟಿತರಾಗಿ ಸಮಾಜದ ಒಳಿತಿಗಾಗಿ ಕೆಲಸ ಮಾಡುವುದು ಉತ್ತಮ ಬೆಳವಣಿಗೆ. ಸಮಾಜಮುಖಿ ಕೆಲಸಗಳ ಮೂಲಕ ನಮ್ಮ ಇರುವಿಕೆ ತೋರ್ಪಡಿಸಬೇಕು, ಸಮಾಜದ ತೀರ ಹಿಂದುಳಿದ ವ್ಯಕ್ತಿಗಳ ಕಷ್ಟಕ್ಕೆ ಧ್ವನಿಯಾಗಿ ನಿಂತು ಕೆಲಸ ಮಾಡಿಕೊಂಡು, ದೇಶದ ಮುಂದಿನ ಆಸ್ತಿಯಾದ ಮಕ್ಕಳ ಶೈಕ್ಷಣಿಕ ಬದುಕಿಗೆ ಸಹಕಾರಿಯಾಗಬೇಕು. ಇಂತಹ ಸಮಾಜಮುಖಿ ಕೆಲಸ ಗಂಜಿಮಠ ಸಂಘದಿಂದ ಆಗುತ್ತಿರುವುದು ಅಭಿನಂದನಾರ್ಹ. ಗಂಜಿಮಠ ಸಂಘ ಕೇವಲ ಸಂಘಟನೆಯಲ್ಲ.ಲ, ಇದು ಸಮಾಜದ ಆಸ್ತಿ ಎಂದು ತಿಳಿಸಿ,ಸಂಘದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ನಾಯ್ಕ್ ಮಾತನಾಡಿ, ನಮ್ಮ ಮೇಲೆ ಸಮಾಜದ ಋಣ ಸಾಕಷ್ಟಿದ್ದು, ಇಂತಹ ಕಾರ್ಯಕ್ರಮಗಳ ಮೂಲಕ ಋಣ ತೀರಿಸುವ ಪ್ರಯತ್ನ ಶ್ಲಾಘನೀಯ. ನಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಕಾಲೇಜು ಸ್ಥಾಪನೆಗೆ ಒಂದಾಗಿ ಪ್ರಯತ್ನಿಸಬೇಕು ಎಂದರು.
ಸಂಘದಿಂದ ಸನ್ಮಾನಿಸಲ್ಪಟ್ಟ ಝೀ ಕನ್ನಡ ಡ್ರಾಮಾ ಜ್ಯೂನಿಯರ್ ಸೀಸನ್ 5ರ ಫೈನಲಿಸ್ಟ್ ಕು. ಅಪೂರ್ವ ಮಾಳ ಅವರು ಸುಶ್ರಾವ್ಯ ಅಭಿನಯದ ಮೂಲಕ ತನ್ನ ಪ್ರತಿಭೆ ವ್ಯಕ್ತಪಡಿಸಿ ನೆರೆದವರನ್ನು ರಂಜಿಸಿದರು. ವಾಮಂಜೂರಿನ ಮಂಗಳಜ್ಯೋತಿ ಶಾಲೆಯ ನಿವೃತ್ತ ಶಿಕ್ಷಕಿ ರೇಣುಕಾ ಕೆ. ಎಸ್, ಉಡುಪಿ ಮರಾಠಿ ಸಂಘದ ಮಾಜಿ ಅಧ್ಯಕ್ಷ ಎಸ್. ಅನಂತ ನಾಯ್ಕ್ ಸಂಘದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ನಿತೇಶ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ ನಾಯ್ಕ್ ಮುಚ್ಚೂರು ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಡಾ. ಪ್ರವೀಣ್ ಪಿ ಮತ್ತು ಬ್ಯಾಂಕಿಂಗ್ ವಿಷಯದಲ್ಲಿ ಡಾಕ್ಟರೇಟ್ ಗಳಿಸಿದ ಡಾ.ಭಾಸ್ಕರ್ ಎ. ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸಮಾಜದ 7 ಮಂದಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಮಾಜದ 5 ನವ ಜೋಡಿ ದಂಪತಿಗಳನ್ನು ಅಭಿನಂದಿಸಿದ ಸಂಘವು,1ರಿಂದ 10ನೇ ತರಗತಿಯ150 ವಿದ್ಯಾರ್ಥಿಗಳಿಗೆ ಛತ್ರಿ ವಿತರಿಸಿತು. ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷ ವಿ.ಪಿ.ನಾಯ್ಕ್, ಕೋಶಾಧಿಕಾರಿ ಪುರಂದರ ನಾಯ್ಕ್ ಮುಚ್ಚೂರು, ಮಹಿಳಾ ಘಟಕ ಅಧ್ಯಕ್ಷೆ ಸವಿತಾ ಒಡ್ಡೂರು ಹಾಗೂ ಇತರ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳಾದ ನಿವೇದಿತಾ ಬೋರುಗುಡ್ಡೆ ಮತ್ತು ಶ್ರಾವ್ಯಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕಾರಿ ಸದಸ್ಯ ಗುಣಪಾಲ ಎನ್. ವಂದಿಸಿದರು.