ಕಾರ್ಕಳ: ಬಾಂಧವ್ಯಕ್ಕಾಗಿ ಸಂಘಟನೆ ಎನ್ನುವ ಧ್ಯೇಯವಾಕ್ಯದಡಿ ಒಕ್ಕಲಿಗ ಯಾನೆ ಗೌಡರ ಸೇವಾ ಸಂಘ ಕಾರ್ಕಳ ಸಂಘದ 27ನೇ ವಾರ್ಷಿಕ ಸಮ್ಮಿಲನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅ.15ರಂದು ಕಾರ್ಕಳ ಬಸ್ ನಿಲ್ದಾಣ ಸಮೀಪದ ಸ್ವಾಗತ್ ಹೊಟೇಲ್ ನಲ್ಲಿ ಸಂಜೆ 6ಕ್ಕೆ ನಡೆಯಲಿದೆ ಎಂದು ಸಂಘದ ಗೌರವಾಧ್ಯಕ್ಷ ಪ್ರೊ. ಬಿ.ಪದ್ಮಬಾಭ ಗೌಡ ಹಾಗೂ ಅಧ್ಯಕ್ಷ ಪುರುಷೋತ್ತಮ ಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕ್ರಿಯೆಟಿವ್ ಶಿಕ್ಷಣ ಪ್ರತಿಷ್ಠಾನದ ಸಹ- ಸಂಸ್ಥಾಪಕ ಅಶ್ವತ್ಥ್ ಎಸ್.ಎಲ್ , ಒಕ್ಕಲಿಗ ಯಾನೆ ಗೌಡರ ಸೇವಾ ಸಂಘದ ಜಿಲ್ಲಾಧ್ಯಕ್ಷ ಸೀತಾರಾಮ ಗೌಡ ಎರ್ಮಾಯಿಲ್ ಭಾಗವಹಿಸಲಿದ್ದಾರೆ. ಸೇವಾ ಸಂಘದ ಗೌರವಾಧ್ಯಕ್ಷ ಪ್ರೊ. ಬಿ. ಪದ್ಮನಾಭ ಗೌಡ ಗೌರವ ಉಪಸ್ಥಿತರಿರುವರು.ಇದೇ ಸಂದರ್ಭ 2026-26 ನೇ ಸಾಲಿನ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು ಎಂದವರು ತಿಳಿಸಿದ್ದಾರೆ.