Share this news

ನವದೆಹಲಿ: ಲೋಕಸಭಾ ಚುನಾವಣೆಯ ಜತೆಗೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದೆ.
ಆಂಧ್ರ ಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ.
ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶ ದ ವಿಧಾನಸಭಾ ಚುನಾವಣೆಯ ಮತದಾನ ಏಪ್ರಿಲ್ 19 ರಂದು ನಡೆಯಲಿದೆ.
ಆಂಧ್ರ ಪ್ರದೇಶ ಹಾಗೂ ಒಡಿಶಾ ವಿಧಾನಸಭಾ ಚುನಾವಣೆ ಮೇ 13ರಂದು ನಡೆಯಲಿದೆ. ಫಲಿತಾಂಶ ಜೂನ್ 4 ರಂದು ಘೋಷಣೆಯಾಗಲಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಮುಖ್ಯಸ್ಥ ರಾಜೀವ್ ಕುಮಾರ್ ಮತದಾನ ದಿನಾಂಕ ಘೋಷಣೆ ಮಾಡಿದ್ದಾರೆ. ಜೂನ್‌ 16ಕ್ಕೆ ಈಗಿನ ಲೋಕಸಭೆಯ ಅವಧಿ ಮುಕ್ತಾಯಗೊಳ್ಳಲಿದೆ. ಅದಕ್ಕೂ ಮುನ್ನ ಹೊಸ ಲೋಕಸಭೆ ಅಸ್ತಿತ್ವಕ್ಕೆ ಬರಬೇಕಿದೆ.
ಇನ್ನು ಆಂಧ್ರಪ್ರದೇಶ, ಸಿಕ್ಕಿಮ್, ಒಡಿಶಾ ಹಾಗೂ ಅರುಣಾಚಲ ಪ್ರದೇಶ ರಾಜ್ಯಗಳ ವಿಧಾನಸಭೆ ಅವಧಿ ಕೂಡ ಜೂನ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಈ 4 ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ.

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ
ಗೆಜೆಟ್ ಅಧಿಸೂಚನೆ: ಎಪ್ರಿಲ್ 18
ನಾಮಪತ್ರ ಸಲ್ಲಿಸಲು ಕೊನೆಯ ದಿನ : ಎಪ್ರಿಲ್ 25
ನಾಮಪತ್ರ ಪರಿಶೀಲನೆ: 26 ಎಪ್ರಿಲ್
ನಾಮಪತ್ರ ಹಿಂಪಡೆಯಲು ಕೊನೆ ದಿನ: ಎಪ್ರಿಲ್ 29
ಮತದಾನ: ಮೇ 13
ಫಲಿತಾಂಶ ಘೋಷಣೆ: ಜೂನ್ 04

ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ
ಗೆಜೆಟ್ ಅಧಿಸೂಚನೆ: ಮಾರ್ಚ್ 20
ನಾಮಪತ್ರ ಸಲ್ಲಿಸಲು ಕೊನೆಯ ದಿನ : ಮಾರ್ಚ್ 27
ನಾಮಪತ್ರ ಪರಿಶೀಲನೆ: 28 ಮಾರ್ಚ್
ನಾಮಪತ್ರ ಹಿಂಪಡೆಯಲು ಕೊನೆ ದಿನ: 30 ಮಾರ್ಚ್
ಮತದಾನ: 19 ಎಪ್ರಿಲ್
ಫಲಿತಾಂಶ ಘೋಷಣೆ: ಜೂನ್ 4

ಸಿಕ್ಕಿಂ ವಿಧಾನಸಭಾ ಚುನಾವಣೆ
ಗೆಜೆಟ್ ಅಧಿಸೂಚನೆ: ಮಾರ್ಚ್ 20
ನಾಮಪತ್ರ ಸಲ್ಲಿಸಲು ಕೊನೆಯ ದಿನ : ಮಾರ್ಚ್ 27
ನಾಮಪತ್ರ ಪರಿಶೀಲನೆ: ಮಾರ್ಚ್ 28
ನಾಮಪತ್ರ ಹಿಂಪಡೆಯಲು ಕೊನೆ ದಿನ: ಮಾರ್ಚ್ 30
ಮತದಾನ: ಎಪ್ರಿಲ್ 19
ಫಲಿತಾಂಶ ಘೋಷಣೆ: ಜೂನ್ 04

ಒಡಿಶಾ ವಿಧಾನಸಭಾ ಚುನಾವಣೆ
ಗೆಜೆಟ್ ಅಧಿಸೂಚನೆ: ಎಪ್ರಿಲ್ 18
ನಾಮಪತ್ರ ಸಲ್ಲಿಸಲು ಕೊನೆಯ ದಿನ : ಎಪ್ರಿಲ್ 25
ನಾಮಪತ್ರ ಪರಿಶೀಲನೆ: 26 ಎಪ್ರಿಲ್
ನಾಮಪತ್ರ ಹಿಂಪಡೆಯಲು ಕೊನೆ ದಿನ: ಎಪ್ರಿಲ್ 29
ಮತದಾನ: ಮೇ 13
ಫಲಿತಾಂಶ ಘೋಷಣೆ: ಜೂನ್ 04

ಚುನಾವಣಾ ದಿನಾಂಕ ಮೊದಲು ಮತದಾರರು, ಸುಗಮ ಮತದಾನಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡಲಾಗಿತ್ತು ಈ ಬಾರಿ ಫೋನ್ ಪೇ, ಗೂಗಲ್ ಪೇ ಸೇರಿದಂತೆ ಎಲ್ಲಾ ರೀತಿಯ ಯುಪಿಐ ವಹಿವಾಟು, ಬ್ಯಾಂಕ್ ಟ್ರಾನ್ಸಾಕ್ಷನ್ ಮೇಲೂ ಕಣ್ಮಿಡಲಾಗುವುದು ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.

Village Accountant Recruitment 2024: Apply Now For 1000 Village Accountant (VA) Vacancies Through Karnataka Revenue Department

Leave a Reply

Your email address will not be published. Required fields are marked *