Share this news

 

 

 

 

ಬೆಂಗಳೂರು, ಅ,30: ಕೇರಳದ ರಾಜ್ಯದ ವಯನಾಡಿನ ಜನರ ಕಷ್ಟಗಳಿಗೆ ಮಿಡಿಯುವ ನಿಮ್ಮ ಮನಸ್ಸು ನಮ್ಮ ನೆರೆಭಾದಿತ ಕಲಬುರಗಿ,ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೀದರ್, ಬೆಳಗಾವಿ ರೈತರ ಕಷ್ಟಕ್ಕೆ ಯಾಕೆ ಮಿಡಿಯುತ್ತಿಲ್ಲ?ಅಸಲಿಗೆ ನೀವು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಕೇರಳದ ಶಾಸಕರೋ? ಅಥವಾ ವಯನಾಡಿನ ಚಂದಾ ವಸೂಲಿಗಾರರೋ? ಎಂದು ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ರೈತರಿಗೆ ನೀಡಬೇಕಾದ ಪರಿಹಾರಕ್ಕಿಂತ, ವಯನಾಡಿಗೆ ನೀಡುವ ಪರಿಹಾರವೇ ನಿಮಗೆ ಮುಖ್ಯ. ಇದು ಉಪಕಾರವೂ ಅಲ್ಲ, ಮಾನವೀಯತೆಯೂ ಅಲ್ಲ. ಇದು ಹೈಕಮಾಂಡ್ ನಾಯಕರನ್ನು ತೃಪ್ತಿಪಡಿಸಿ ಅಲುಗಾಡುತ್ತಿರುವ ಕುರ್ಚಿ ಉಳಿಸಿಕೊಳ್ಳುವ ರಾಜಕೀಯ. ಕರ್ನಾಟಕದ ತೆರಿಗೆ ಹಣವನ್ನು ಹೈಕಮಾಂಡ್ ಎಟಿಎಂ ಹಾಗೆ ಬಳಸುವ, ನಕಲಿ ಗಾಂಧಿಗಳ ಗುಲಾಮರಂತೆ ವರ್ತಿಸುವ, ಮತ ಹಾಕಿ ಅಧಿಕಾರ ಕೊಟ್ಟ ತಾಯ್ನಾಡಿನ ರೈತರನ್ನೇ ಮರೆತುಬಿಡುವ ನಾಡದ್ರೋಹಿ ಮುಖ್ಯಮಂತ್ರಿಯನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ. ಕರ್ನಾಟಕಕ್ಕೆ ಬೇಕಿರುವುದು ಕನ್ನಡಿಗರ ಹಿತಾಸಕ್ತಿ ಕಾಪಾಡುವ ಬದ್ಧತೆ ಇರುವ ಮುಖ್ಯಮಂತ್ರಿಯೇ ಹೊರತು ಕೇರಳದ ವಯನಾಡಿನ ಬ್ರ‍್ಯಾಂಡ್ ಅಂಬಾಸಡರ್ ಅಲ್ಲ, ದೆಹಲಿ ದೊರೆಗಳ ಗುಲಾಮರಲ್ಲ. ನೆರೆಬಾಧಿತ ರೈತರಿಗೆ ಈ ಕೂಡಲೇ ಪರಿಹಾರ ಹಣವನ್ನು ತಕ್ಷಣ ಬಿಡುಗಡೆ ಮಾಡಿ. ಕರ್ನಾಟಕ ಹಣವನ್ನು ನಿಮ್ಮ ಸ್ವಾರ್ಥಕ್ಕಾಗಿ ವಯನಾಡಿಗೆ ಸಾಗಿಸುವುದನ್ನು ನಿಲ್ಲಿಸಿ ಎಂದು ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *