ಕಾರ್ಕಳ, ಸೆ.11: ಕಾರ್ಕಳ ತಾಲೂಕಿನಾದ್ಯಂತ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಅಡಿಕೆ ತೋಟಗಳಲ್ಲಿ ತೀವ್ರ ಪ್ರಮಾಣದಲ್ಲಿ ಅಡಿಕೆ ಕೊಳೆರೋಗ ಕಾಣಿಸಿಕೊಂಡಿದ್ದು ಅದರ ಮುಂದಿನ ಭಾಗವಾಗಿ ಚಂಡೆ ಕೊಳೆರೋಗ (crown rot) ಕಾಣಿಸಿಕೊಳ್ಳುತ್ತಿದ್ದು ದೊಡ್ಡಪ್ರಮಾಣದಲ್ಲಿ ರೈತರಿಗೆ ನಷ್ಟವನ್ನುಂಟುಮಾಡುತ್ತಿದೆ. ಭಾದಿತ ಮರಗಳು ಕ್ರಮೇಣ ಸತ್ತುಹೋಗುವುದರಿಂದ ರೈತರಿಗೆ ಹೆಚ್ಚು ನಷ್ಟ ಸಂಭವಿಸುತ್ತದೆ. ಅಡಿಕೆ ಕೊಳೆರೋಗಕ್ಕೆ ಕಾರಣವಾಗುವ ಶೀಲೀಂದ್ರ ಪೈಟೋಪ್ತೆರಾಮಿಡಿಯೈ ಶೀಲೀಂದ್ರವೇ ಈ ರೋಗಕ್ಕೂ ಕಾರಣವಾಗಿದ್ದು, ಹೆಚ್ಚುಕಾಯಿ ಕೊಳೆಭಾದಿತ ತೋಟಗಳಲ್ಲಿ ಈ ರೋಗಕಂಡುಬರುತ್ತದೆ. ಈ ರೋಗವುಅಗಸ್ಟ್- ಸೆಪ್ಟೆಂಬರ್ ನಿಂದ ಪ್ರಾರಂಭವಾಗಿ ತೋಟಗಳಲ್ಲಿಜನವರಿ- ಫೆಬ್ರವರಿವರೆಗೂಕಂಡುಬರುತ್ತದೆ. ಬಿಸಿಲು-ಮಳೆ, ರಾತ್ರಿಯ ಕಡಿಮೆ ಉಷ್ಣಾಂಶ ಹಾಗೂ ಮಂಜು ಬೀಳುವಿಕೆ ಈ ರೋಗದ ಶೀಲೀಂದ್ರದ ಬೆಳೆವಣಿಗೆಗೆ ಸಹಕಾರಿ.ಪ್ರಾರಂಭದ ಲಕ್ಷಣವಾಗಿ ಹಸಿರುಗರಿಗಳು ಜೋತುಬೀಳುತ್ತವೆ. ಕ್ರಮೇಣ ಅವುಗಳು ಹಳದಿಬಣ್ಣಕ್ಕೆ ತಿರುಗುತ್ತವೆ. ಸುಳಿಗರಿ ತುಂಬಾ ಸಮಯ ಹಸಿರಾಗಿ ಉಳಿದು ತದನಂತರ ಒಣಗಿ ಚಂಡೆಭಾಗ ಕಳಚಿಬೀಳುತ್ತದೆ. ಅಡಿಕೆ ಹಾಳೆಯ ಒಳಬುಡಭಾಗದಲ್ಲಿ ಕಂದುಬಣ್ಣದ ಭಾಗಕಾಣಬಹುದು. ಅಡಿಕೆಹಾಳೆಯ ಬುಡಭಾಗದಲ್ಲಿ ಹಾಗೂ ಅಡಿಕೆಗೊನೆಯ ಬುಡಭಾಗದಲ್ಲಿ ಶೀಲೀಂದ್ರ ಪ್ರವೇಶಿಸಿ ಕಾಂಡದ ಒಳಭಾಗವನ್ನು ಪೂರ್ಣಕೊಳೆಯುವಂತೆ ಮಾಡುತ್ತದೆ ಹಾಗೂ ಕಾಂಡದ ಒಳಭಾಗವು ಕೊಳೆತವಾಸನೆಹೊಂದಿರುತ್ತದೆ.
ನಿಯಂತ್ರಣ ಕ್ರಮಗಳು:
ಈ ರೋಗವನ್ನು ಸಮಗ್ರ ನಿಯಂತ್ರಣ ಕ್ರಮಗಳಿಂದ ನಿರ್ವಹಣೆಮಾಡಬಹುದಾಗಿದೆ. ಈ ರೋಗವು ಸಾಮಾನ್ಯವಾಗಿ ಹಳೆಯ ಅಡಿಕೆಮರಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು ಅಸಮರ್ಪಕ ಬೋರ್ಡೋ ಸಿಂಪರಣೆ ಸಹ ಒಂದು ಕಾರಣವಾಗಿರಬಹುದು. ಅಡಿಕೆ ಕೊಳೆರೋಗ ನಿಯಂತ್ರಣಕ್ರಮಗಳನ್ನು ಪೂರ್ಣವಾಗಿ ಅನುಸರಿಸುವ ರೈತರತೋಟಗಳಲ್ಲಿ ಈ ರೋಗದಭಾದೆಕಡಿಮೆ.ಪ್ರಾರಂಭಿಕಹಂತದಲ್ಲಿ ರೋಗಭಾದಿತ ಮರಗಳನ್ನು ಗುರುತಿಸಿ ನಿಯಂತ್ರಣ ಕ್ರಮಗಳನ್ನು ಅನುಸರಿಸಿದರೆ ಮರಗಳನ್ನು ಉಳಿಸಿಕೊಳ್ಳಬಹುದಾಗಿದೆ.ರೋಗಬಂದ ನಂತರದಲ್ಲಿ ಹತೋಟಿಕ್ರಮಗಳನ್ನುಕೈಗೊಳ್ಳುವಬದಲು ರೋಗಬಾರದಂತೆ ಮುನ್ನೆಚ್ಚರಿಕೆಕ್ರಮಕೈಗೊಳ್ಳುವುದುಒಳಿತು.ಸಮರ್ಪಕ ಬಸಿಗಾಲುವೆಗಳ ನಿರ್ವಹಣೆ.ಮಣ್ಣುಪರೀಕ್ಷೆ ಆಧಾರದಲ್ಲಿ ಶೀಫಾರಸ್ಸು ಮಾಡಿದ ಪೋಷಕಾಂಶಗಳನ್ನು ಹಾಗೂ ಸುಣ್ಣವನ್ನು ನಿಯಮಿತವಾಗಿನೀಡುವುದು.ಬೇವಿನಹಿಂಡಿ ಹಾಗೂ ಟ್ರೈಕೋಡರ್ಮಾ ಮಿಶ್ರಣವನ್ನು ಮಳೆಗಾಲದಪೂರ್ವದಲ್ಲಿ ಅಡಿಕೆಮರಗಳಿಗೆನೀಡುವುದು.ಮರಗಳಲ್ಲಿ ನೇತಾಡುತ್ತಿರುವ ಕೊಳೆರೋಗಭಾದಿತ ಸಿಂಗಾರಗಳನ್ನು ಸಂಗ್ರಹಿಸಿಸುಡುವುದು.ಚಂಡೆಕೊಳೆಭಾದೆಯಿಂದ ಸತ್ತಂತಹ ಮರಗಳನ್ನು ಕತ್ತರಿಸಿಸುಡುವುದು.ರೋಗಲಕ್ಷಣ ಹೊಂದಿರುವ ತೋಟಗಳಲ್ಲಿ ಮರಗಳ ಎಲೆಗಳಿಗೆ ಹಾಗೂ ಕುಬೆಭಾಗಕ್ಕೆ ಮೆಟಾಲಾಕ್ಸಿಲ್ 35% ಶೀಲೀಂದ್ರನಾಶಕವನ್ನು 2ಗ್ರಾಂ 1 ಲೀಟರ್ ನೀರಿನಲ್ಲಿ ಬೆರೆಸಿಸಿಂಪರಣೆಮಾಡುವುದು. ಸಿಂಪರಣೆ ಮಾಡಿದ ತರುವಾಯುಕನಿಷ್ಠ 3-4 ಗಂಟೆಗಳ ಬಿಸಿಲುಅವಶ್ಯ.ರೈತರು ನಿಯಮಿತವಾಗಿ ಅಡಿಕೆಕೊಳೆ ನಿಯಂತ್ರಣಕ್ಕೆ ಸಿಂಪಡಿಸುವ ಬೋರ್ಡೊ ದ್ರಾವಣವನ್ನು ಮಳೆಪ್ರಾರಂಭವಾದ ನಂತರದಲ್ಲಿ ಮಾತ್ರ ನೀಡುವುದಲ್ಲದೇ,ಮಳೆಗಾಲ ಪ್ರಾರಂಭದ ಪೂರ್ವದಲ್ಲಿ ನೀಡಬೇಕು ಹಾಗೂ 2ಹಾಗೂ3ನೇ ಬಾರಿ ಬೋರ್ಡೋ ಸಿಂಪರಣೆ ಸಮಯದಲ್ಲಿ ಕುಬೆಭಾಗಕ್ಕೂ ಸಿಂಪರಣೆಮಾಡುವುದುಅವಶ್ಯ ಎಂದು ಕಾರ್ಕಳ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ ಬಿ.ವಿ ಮಾಹಿತಿ ನೀಡಿದ್ದಾರೆ.