ಕಾರ್ಕಳ: ಭಾನುವಾರದ ಬಾಡೂಟಕ್ಕಾಗಿ ಮದ್ಯ ಪಾರ್ಸೆಲ್ ತರಲು ತಡ ಮಾಡಿದ ಎನ್ನುವ ಕಾರಣಕ್ಕೆ ಮನೆಗೆಲಸದವನ ಮೇಲೆ ಮಾಲೀಕ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ರೆಂಜಾಳದಲ್ಲಿ ನಡೆದಿದೆ.
ಮನೆಗೆಲಸದಾತ ನೀಲಯ್ಯ (58),ಎಂಬವರು ಹಲ್ಲೆಗೊಳಗಾದ ವ್ಯಕ್ತಿ. ರೆಂಜಾಳದ ಹರೀಶ್ ಎಂಬವರ ಮನೆಯಲ್ಲಿ ನೀಲಯ್ಯ ಕೆಲಸ ಮಾಡಿಕೊಂಡಿದ್ದು, ಮಾ 10ರಂದು ಭಾನುವಾರ ರಜಾದಿನವಾಗಿದ್ದ ಹಿನ್ನಲೆಯಲ್ಲಿ ಸಂಜೆ ತನ್ನ ಕೆಲಸ ಮುಗಿಸಿ ಕೋಳಿ ಮಾಂಸ ತಂದು ಕೊಡುವಂತೆ ಮಾಲೀಕ ಹರೀಶ್ ಹೇಳಿದ್ದ, ಕೋಳಿ ಮಾಂಸ ತಂದ ಬಳಿಕ ತನಗೆ ಮದ್ಯ ತಂದುಕೊಡುವAತೆ ಹಣ ಕೊಟ್ಟು ಕಳಿಸಿದ್ದ ಆದರೆ ನೀಲಯ್ಯ ಮದ್ಯ ಪಾರ್ಸೆಲ್ ತರುವಲ್ಲಿ ತಡ ಮಾಡಿದ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಆರೋಪಿ ಹರೀಶ್, ನೀಲಯ್ಯ ಮದ್ಯ ತರುತ್ತಿದ್ದಾಗ ಏಕಾಎಕಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾಗಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.