Share this news

ನವದೆಹಲಿ: ಸಿವಿಲ್ ನ್ಯಾಯಾಧೀಶರ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಮೂರು ವರ್ಷಗಳ  ವಕೀಲ ವೃತ್ತಿ ಕಡ್ಡಾಯ ಎಂಬ ಷರತ್ತನ್ನು ಸುಪ್ರೀಂ ಕೋರ್ಟ್ ವಿಧಿಸಿದೆ. ನ್ಯಾಯಾಂಗ ಸೇವೆಗೆ ಪ್ರವೇಶಿಸಲು ಮೂರು ವರ್ಷಗಳ ಕನಿಷ್ಠ ಅಭ್ಯಾಸವು ಕಡ್ಡಾಯವೇ ಎನ್ನುವ ಕುರಿತು ಅಖಿಲ ಭಾರತ ನ್ಯಾಯಾಧೀಶರ ಸಂಘವು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಭೂಷಣ್ ಆರ್ ಗವಾಯಿ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿತು.

ಕಳೆದ 2002 ರಲ್ಲಿ ಹೊಸ ಕಾನೂನು ಪದವೀಧರರು ನ್ಯಾಯಾಂಗ ಸೇವೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಷರತ್ತನ್ನು ತಿರಸ್ಕರಿಸಿದ ನಿರ್ಧಾರವು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಸುಪ್ರೀಂ ಹೇಳಿದೆ. 2002 ರಲ್ಲಿ ಸುಪ್ರೀಂ ಕೋರ್ಟ್ ಕಾನೂನು ಪದವೀಧರರಿಗೆ ಸಿವಿಲ್ ನ್ಯಾಯಾಧೀಶ (ಕಿರಿಯ ವಿಭಾಗ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ನಂತರ ಕಳೆದ 20 ವರ್ಷಗಳಿಂದ ಹೈಕೋರ್ಟ್ಗಳು ಪಡೆದ ಅನುಭವವನ್ನು ಗಮನಿಸಿದರೆ, ವಕೀಲ ವೃತ್ತಿಯನ್ನು ಅಭ್ಯಾಸ ಮಾಡದ ಕಾನೂನು ಪದವೀಧರರ ನೇಮಕಾತಿಯು ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಪೀಠ ಹೇಳಿದೆ.

 

 

 

 

Leave a Reply

Your email address will not be published. Required fields are marked *