ಅಜೆಕಾರು: ಶ್ರೀ ವಿಷ್ಣು ಫ್ರೆಂಡ್ಸ್ ಅಜೆಕಾರು ಹಾಗೂ ಶ್ರೀ ವಿಷ್ಣು ಮಹಿಳಾ ಘಟಕ ಅಜೆಕಾರು ಇವರ ಜಂಟಿ ಆಶ್ರಯದಲ್ಲಿ ಮರ್ಣೆ ಗ್ರಾಮದ ಹಿಂದೂ ಬಾಂಧವರಿಗಾಗಿ ಮೂರನೇ ವರ್ಷದ “ಆಟಿಡೊಂಜಿ ಕೆಸರ್ದ ಗೊಬ್ಬು” ಜುಲೈ 27 ರಂದು ಭಾನುವಾರ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬಳಿ ನಡೆಯಲಿದೆ.
ಮರ್ಣೆ ಗ್ರಾಮದ ಹಿರಿಯರು, ಕಿರಿಯರು, ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆಯಲಿದ್ದು ಮರ್ಣೆ ಗ್ರಾಮದ ಹಿಂದೂ ಬಾಂಧವರು ಇದರಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಕಾರ್ಯಕ್ರಮದ ಸಂಘಟಕರು ವಿನಂತಿಸಿದ್ದಾರೆ.