ಉಡುಪಿ : ಕರ್ನಾಟಕ ರಾಜ್ಯದಲ್ಲಿ ದೇವರಾಜ ಅರಸುರವರ ನಂತರ ರಾಜ್ಯ ಕಂಡ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇರುವ ಸಿದ್ದರಾಮಯ್ಯರನ್ನು ತುಳಿಯುವ ಪ್ರಯತ್ನ ಇತಿಹಾಸ ತಿರುಚಿದವರಿಂದ ಮತ್ತೆ ನಡೆಯುತ್ತಿದೆ ಎಂದು ಇಂಟಕ್ ಜಿಲ್ಲಾಧ್ಯಕ್ಷ ಕೆ. ಎಸ್ ಕಿರಣ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.
ಇತಿಹಾಸದಲ್ಲಿ ನಾವು ಮೋಸಗಾರರೆಂಬ ಹಣೆಪಟ್ಟಿ ಹೊತ್ತವರು ಚರಿತ್ರೆಯ ಪುಸ್ತಕದಲ್ಲಿ ಇರುವ ಸೀತೆಯಂತೆ ಜೀವನ ಸಾಗಿಸಿದ ಸಿದ್ದರಾಮಯ್ಯನವರ ಹೆಂಡತಿಯನ್ನು ಚರಿತ್ರೆಯನ್ನು ಅಳಿಸಿ ಸುಳ್ಳು ಚರಿತ್ರೆ ಬರೆಯಲು ಹೊರಟಿದ್ದಾರೆ.
ಸಿದ್ದರಾಮಯ್ಯ ಹೆಂಡತಿಯ ಸೌಮ್ಯ ಮತ್ತು ಸಾತ್ವಿಕ ಭಾವನೆಗಳನ್ನು ಕೆಣಕುವ ಪ್ರಯತ್ನ ನಡೆಯುತ್ತಿದೆ. ಇದು ಮುಂದುವರಿದಲ್ಲಿ ಮುಂದೆಯ ದಿನ ಮಹಿಳೆಯರು ಈ ನೆಲದ ಅಳಿಸಿದ ಚರಿತ್ರೆಯನ್ನು ಎತ್ತಿ ಹಿಡಿದು ಸುಳ್ಳು ಚರಿತ್ರೆ ಬರೆದವರಿಗೆಲ್ಲ ಪಾಠ ಕಲಿಸುತ್ತಾರೆ. ಇದೇ ಮುಂದಿನ ರಾಜ್ಯಸಭಾ ಚುನಾವಣೆಯ ಮೂಲ ಮಂತ್ರವಾಗಲಿದೆ 200 ಸೀಟುಗಳ ಬರಲಿದೆ ಎಂದು ಇಂಟಕ್ ಜಿಲ್ಲಾಧ್ಯಕ್ಷ ಕೆ. ಎಸ್ ಕಿರಣ್ ಹೆಗ್ಡೆ ಹೇಳಿದರು.