ಕಾರ್ಕಳ: ಅರ್ಪಣಾ ತಾಲೂಕು ಒಕ್ಕೂಟ ಕಾರ್ಕಳ ತಾಲೂಕು ಇದರ ಮುಂದಾಳುತ್ವದಲ್ಲಿ ತಾಲೂಕಿನ ಇತರ 9 ಘಟಕಗಳ ಸಹಭಾಗಿತ್ವದಲ್ಲಿ 9 ವಲಯ ಮಟ್ಟದ ಮಹಿಳಾ ದಿನಾಚರಣೆ ಮಾ.11 ರಂದು ಅತ್ತೂರಿನ ಸಂತ ಲಾರೆನ್ಸ್ ಬಾಸಿಲಿಕಾದ ಸಭಾ ಭವನದಲ್ಲಿ ನಡೆಯಿತು. ವಲಯ ನಿರ್ದೇಶಕರಾದ ಪಾವ್ಲ್ ಕುಟಿನ್ಹೊ ಅಧ್ಯಕ್ಷತೆ ವಹಿಸಿದ್ದರು.
ಆಲ್ಬನ್ ಡಿಸೋಜಾ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಶ್ರೀಮತಿ ಹುಮೈರಾ ಖಾತೂನ್, ಶ್ರೀಮತಿ ಶಶಿಕಲಾ ಹೆಗ್ಡೆ ಸಂಪದ ಉಡುಪಿ ಸಂಯೋಜಕರಾದ ಸ್ಟಾöನ್ಲಿ ಫೆರ್ನಾಂಡಿಸ್, ಗ್ರೇಸಿ ಕುವೆಲ್ಲೊ, ಅರ್ಪಣಾ ತಾಲೂಕು ಒಕ್ಕೂಟದ ಅಧ್ಯಕ್ಷೆ ಲವೀನಾ ಪಿರೇರಾ, ಕಾರ್ಯದರ್ಶಿ ಸೋಫಿಯಾ ಡೇಸಾ, ಹಾಗೂ 9 ಘಟಕಗಳ ಅಧ್ಯಕ್ಷರು
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಶಿಕಲಾ ಹೆಗ್ಡೆ ಮಹಿಳೆ ಹಾಗೂ ಮಹಿಳಾ ದಿನಾಚರಣೆಯ ಮಹತ್ವ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಇಬ್ಬರು ಸ್ವಾವಲಂಬಿ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಂಪದ ಕಾರ್ಯಕರ್ತೆ ಐರಿನ್ ನೊರೊನ್ಹಾ, ಜೆಸಿಂತಾ ಡಿ.ಸೋಜ, ಪ್ರಿಯಾ ಕ್ವಾಡ್ರಸ್ ಹಾಜರಿದ್ದರು.
ವಲಯಾಧ್ಯಕ್ಷೆ ಲವೀನಾ ಪಿರೇರಾ ಸ್ವಾಗತಿಸಿ, ಕಾರ್ಯದರ್ಶಿ ಸೋಫಿಯಾ ಡೇಸಾ ವಾರ್ಷಿಕ ವರದಿ ಮಂಡಿಸಿದರು. ಹಿಲ್ಡಾ ಫೆರ್ನಾಂಡಿಸ್‌ರವರು ಧನ್ಯವಾದವಿತ್ತರು. ಮಿಯ್ಯಾರು ಘಟಕದ ಸ್ಮಿತಾ ರೇಂಜರ್ ಹಾಗೂ ವಿಲ್ಮಾ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು.
K