ಕಾರ್ಕಳ: ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮದುವೆ ಸೀರೆಗಳಿಗೆ ಮನೆಮಾತಾಗಿರುವ ಅವತಾರ್ ಸಿಲ್ಕ್ಸ್ ಕಾರವಾರ, ಕುಮಟಾ ಹಾಗೂ ಹೊನ್ನಾವರದಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು , ಇದೀಗ ಅವತಾರ್ ಸಿಲ್ಕ್ಸ್’ನ 4ನೇ ಮಳಿಗೆಯು ಕಾರ್ಕಳದ ವೆಂಕಟರಮಣ ದೇವಳದ ಬಳಿಯ ಸುಧೀಂದ್ರ ರೆಸಿಡೆನ್ಸಿ ವಾಣಿಜ್ಯ ಸಂಕೀರ್ಣದಲ್ಲಿ ಸೆ 16ರಂದು ಬೆಳಗ್ಗೆ 10 ಗಂಟೆಗೆ ಶುಭಾರಂಭಗೊಳ್ಳಲಿದೆ.
ಸುಧೀಂದ್ರ ರೆಸಿಡೆನ್ಸಿಯ ಮೊದಲ ಮಹಡಿಯಲ್ಲಿನ ಸುಮಾರು 4500 ಸಾವಿರ ಚದರ ಅಡಿಯ ವಿಶಾಲವಾದ ಮಳಿಗೆಯಾಗಿರುವ ಅವತಾರ್ ಸಿಲ್ಕ್ಸ್ ನಲ್ಲಿ ಪ್ರಮುಖವಾಗಿ ಮದುವೆ ಸೀರೆಗಳು, ಮಹಿಳೆಯರ ಆಯ್ಕೆಯ ಕುರ್ತೀಸ್, ಲೆಹೆಂಗಾ, ತ್ರೀಪೀಸ್ ಗೌನ್, ಕಾಟನ್, ಫ್ಯಾನ್ಸಿ ಹಾಗೂ ರೇಶ್ಮೆ ಸೀರೆಗಳ ಅಪಾರ ಸಂಗ್ರಹವಿದೆ. ಇದಲ್ಲದೇ ಕೈಮಗ್ಗದ ಟವೆಲ್ ಸೇರಿದಂತೆ ಸಾಕಷ್ಟು ವಿನ್ಯಾಸದ ವಸ್ತ್ರಗಳ ಸಂಗ್ರಹವಿದೆ. ಇದಲ್ಲದೇ ಉದ್ಘಾಟನೆಯ ಅಂಗವಾಗಿ ಸೆ 30ರವರೆಗೆ ಪ್ರತೀ ಖರೀದಿಯ ಮೇಲೆ ಶೇ 20 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಕಾರ್ಕಳದ ಗಾಯತ್ರಿ ಎಕ್ಸ್ಪೋರ್ಟ್ಸ್ ನ ಮಾಲಕರಾದ ಬೋಳ ಪ್ರಶಾಂತ್ ಕಾಮತ್ ಮುಖ್ಯ ಅತಿಥಿಯಾಗಿ ಅವತಾರ್ ಸಿಲ್ಕ್÷್ಸ ನ ಶೋ ರೂಮನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರ,ಮದಲ್ಲಿ ಅತಿಥಿಗಳಾಗಿ ಕಾರ್ಕಳ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರರಾದ ಕೆ.ಜಯರಾಮ ಪ್ರಭು, ಶಿಕ್ಷಕಿ ವಂದನಾ ರೈ, ಜೇಸಿ ತರಬೇತುದಾರ ಕೆ.ರಾಜೇಂದ್ರ ಭಟ್ ಹಾಗೂ ಸುಧೀಂದ್ರ ರೆಸಿಡೆನ್ಸಿ ಮಾಲಕ ಜಗದೀಶ್ ಶೆಣೈ ಉಪಸ್ಥಿತರಿರಲಿದ್ದಾರೆ ಎಂದು ಅವತಾರ್ ಸಿಲ್ಕ್ಸ್’ನ ಆಡಳಿತ ನಿರ್ದೇಶಕ ವರದ್ ಕೆ ತಿಳಿಸಿದ್ದಾರೆ.
in