ನವದೆಹಲಿ: ಎನ್ ಸಿ ಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ನೇಪಾಳದ ಗಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರ್ ಸಿಕ್ಕಿಬಿದ್ದಾಗ ನೇಪಾಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ. ಅಲ್ಲಿ ಎಸ್‌ಟಿಎಫ್ ಸಕಾಲದಲ್ಲಿ ಬಲೆ ಬೀಸಿ ಆತನನ್ನು ಹಿಡಿದಿದೆ.ಉತ್ತರ ಪ್ರದೇಶ ಪೊಲೀಸರು ಮತ್ತು ಮುಂಬೈ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಶೂಟರ್ ಶಿವಕುಮಾರ್ ಅಲಿಯಾಸ್ ಶಿವನನ್ನು ನೇಪಾಳದ ಬಹ್ರೈಚ್ ಬಳಿ ಬಂಧಿಸಿದ್ದಾರೆ. ಯುಪಿ ಮತ್ತು ಮುಂಬೈನ ಎಸ್‌ಟಿಎಫ್ ತಂಡವು ನೇಪಾಳದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಶಿವ ಮತ್ತು ಅವನ ನಾಲ್ವರು ಸಹಚರರನ್ನು ಹಿಡಿದಿದ್ದಾರೆ.
ಎನ್‌ಸಿಪಿ ಮುಖಂಡ ಸಿದ್ದಿಕ್ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಗುರುವಾರ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇದುವರೆಗೆ 23 ಮಂದಿಯನ್ನು ಬಂಧಿಸಲಾಗಿದೆ. ಪುಣೆ ನಗರದ ಕರ್ವೇನಗರ ಪ್ರದೇಶದ ನಿವಾಸಿಗಳಾದ ಆದಿತ್ಯ ಗುಲಾಂಕರ್ (22) ಮತ್ತು ರಫೀಕ್ ನಿಯಾಜ್ ಶೇಖ್ (22) ಆರೋಪಿಗಳ ಪೈಕಿ ಒಬ್ಬ ಆರೋಪಿ ಪ್ರವೀಣ್ ಲೋಂಕರ್ ಮತ್ತು ಇನ್ನೊಬ್ಬ ಆರೋಪಿ ರೂಪೇಶ್ ಮೊಹೋಲ್ ಜೊತೆ ಸಂಪರ್ಕದಲ್ಲಿದ್ದ ಕಾರಣ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಮೂವರು ಬಂದೂಕುಧಾರಿಗಳಿAದ ಗುಂಡಿಕ್ಕಿ ಕೊಂದಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದಿಕ್ ಹತ್ಯೆಯ ಹಿಂದೆ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಕಿರಿಯ ಸಹೋದರ ಅನ್ಮೋಲ್ ಕೆನಡಾದಲ್ಲಿ ವಾಸಿಸುತ್ತಿದ್ದಾರೆ.