ಹೆಬ್ರಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಹೆಬ್ರಿ ವಲಯ ಬಚ್ಚಪ್ಪು ಒಕ್ಕೂಟದ ಏಳು ಸಂಘಗಳ ಬೆಳ್ಳಿ ಹಬ್ಬದ ಪ್ರಯುಕ್ತ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯು ಬಚ್ಚಪ್ಪು ಗೋಪಾಲ ನಾಯ್ಕರ ಮನೆಯ ಅಂಗಳದಲ್ಲಿ ಎ. 10 ರಂದು ನಡೆಯಿತು.
ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ವಿದ್ವಾನ್ ದಾಮೋದರ ಶರ್ಮ ಉದ್ಘಾಟಿಸಿ ಮಾತನಾಡಿ ನಮ್ಮ ಬದುಕಿನ ಸರಿಯಾದ ಸಾರ್ಥಕತೆಯನ್ನು ಬಳಸಿಕೊಂಡು ನಡೆಯುವುದೇ ನಮ್ಮ ನಿಜವಾದ ಜೀವನ. ಅಂತಹ ಜೀವನವನ್ನು ಕಲ್ಪಿಸುವುದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನಮ್ಮ ಮುಂದೆ ಬಂದಿದೆ.ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಜನರ ಮನೆ ಬಾಗಿಲಿಗೆ ತಲಪಿಸುವಲ್ಲಿ ಯೋಜನೆಯು ಸಾಕಷ್ಟು ಯಶಸ್ಸನ್ನು ಕಂಡಿದೆ. ದೇವಸ್ಥಾನದ ಸ್ವಾಮಿ ದೇವರ ಅನುಗ್ರಹ ವನ್ನು ಮುಂದಿಟ್ಟುಕೊAಡು ಜನ ಹಿತ, ಅರೋಗ್ಯ ಸೇವೆ,ಶಿಕ್ಷಣ ಕ್ಷೇತ್ರ ಇನ್ನೂ ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಕಾಲ ಕಾಲಕ್ಕೆ ಯೋಜನೆಯು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ. ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಿದ್ದೀರಿ.ಶ್ರದ್ದೆಯಿಂದ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ದೇವರು ಸನ್ಮಂಗಳವನ್ನು ನೀಡಲಿ ಎಂದರು.
ವರದಿಯಲ್ಲಿ ನಮೂದಿಸಿದಂತೆ ಏಳು ಸ್ವ ಸಹಾಯ ಸಂಘಗಳ ಪ್ರಗತಿ ಶ್ಲಾಘನೀಯವಾಗಿದೆ. ಬೆಳ್ಳಿ ಹಬ್ಬದ ಪ್ರಯುಕ್ತ ಸತ್ಯ ನಾರಾಯಣ ಪೂಜೆಯು ನಡೆದಿದೆ. ಪೂಜೆ ಮಾಡಿಸುವುದರಿಂದ ಸಾಮರಸ್ಯದಿಂದಿರಲು ಮತ್ತು ಜೀವನದ ಯಶಸ್ಸಿಗೆ ಆಶೀರ್ವಾದ ಪಡೆಯಲು ಮಾಡಲಾಗುತ್ತಿದೆ . ಸತ್ಯ ನಾರಾಯಣ ಪೂಜೆಯ ಫಲವಾಗಿ ಇನ್ನೂ ಒಕ್ಕೂಟವು ಸಾಮರಸ್ಯದಿಂದ ಮುನ್ನಡೆಯಲಿ ಎಂದು ಜಿಲ್ಲಾ ನಿರ್ದೇಶಕರಾದ ನಾಗರಾಜ ಶೆಟ್ಟಿ ಹೇಳಿದರು. ಜನ ಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ ಒಕ್ಕೂಟಕ್ಕೆ ಶುಭ ಹಾರೈಸಿದರು.
ಪೂರ್ಣೇಶ್ ಕುಲಾಲ್ ವರದಿ ಮಂಡಿಸಿದರು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಉದಯ ಪೂಜಾರಿ ವಹಿಸಿದ್ದರು. ಪ್ರಗತಿ ಬಂಧು ತಂಡದ ಮಾಜಿ ಹಿರಿಯ ಸದಸ್ಯರಾದ ರಾಜು ಕುಲಾಲ್, ಶೀನ ನಾಯ್ಕ್ ಬಚ್ಚಪ್ಪು, ಗೋಪಾಲ ನಾಯ್ಕ್ ಮತ್ತು ಬಚ್ಚಪ್ಪು ಒಕ್ಕೂಟದ ಸೇವಾ ಪ್ರತಿನಿಧಿಯಾದ ಕಾಂತಿ ಹೆಗ್ಡೆ ಯವರನ್ನು ಸನ್ಮಾನಿಸಲಾಯಿತು. ಮದ್ಯಾಹ್ನ ಎಲ್ಲರೂ ಅನ್ನ ಪ್ರಸಾದ ಸ್ವೀಕರಿಸಿದರು.
ಹೆಬ್ರಿ ವಲಯ ಯೋಜನಾಧಿಕಾರಿ ಲೀಲಾವತಿ,ಹೆಬ್ರಿ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ನರೇಂದ್ರ ನಾಯಕ್, ಶ್ರೀ ಕ್ಷೇತ್ರ. ಧ. ಗ್ರಾ ಯೋಜನೆಯ ಸಮಿತಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಪ್ರವೀಣ್ ಹೆಗ್ಡೆ, ವಲಯ ಅಧ್ಯಕ್ಷರಾದ ಶಾಲಿನಿ ಭಂಡಾರಿ ಉಪಸ್ಥಿತರಿದ್ದರು.
ವಿಜಯ ಶೆಟ್ಟಿ ಸ್ವಾಗತಿಸಿದರು.ಯೋಜನೆಯ ಸೂಪರ್ವೈಸರ್ ಉದಯ ರವರು ನಿರೂಪಿಸಿ, ಪ್ರಸಾದ್ ಶೆಟ್ಟಿ ವಂದಿಸಿದರು. ಮಹೇಶ್ ನಾಯ್ಕ್ ಸಹಕರಿಸಿದರು. ಯೋಜನೆಯ ಪದಾಧಿಕಾರಿಗಳು, ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಸೇವಾ ಪ್ರತಿನಿಧಿಗಳು ಹಾಜರಿದ್ದರು.