Share this news

 

ಕಾರ್ಕಳ: ಪುರಸಭಾ ವ್ಯಾಪ್ತಿಯಲ್ಲಿ ಅಮೃತ್ 2.0 ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಹೊಸದಾಗಿ ನಿರ್ಮಣವಾಗಿರುವ GLSR ಹಾಗೂ ಫಿಲ್ಟರ್ ಮೀಡಿಯಾವನ್ನು ರಾಮಸಮುದ್ರ ಜಲಶುದ್ದೀಕರಣ ಘಟಕದಲ್ಲಿರುವ ಓವರ್ ಹೆಡ್ ಟ್ಯಾಂಕಿಗೆ ಸಂಪರ್ಕಿಸಲು ಹಾಗೂ ಪರಿವರ್ತಕಕ್ಕೆ ವಿದ್ಯುತ್ ಸಂಪರ್ಕ ನೀಡುವ ಕಾಮಗಾರಿ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಆಗಸ್ಟ್ 02 ಹಾಗೂ 03 ರಂದು ನೀರು ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಪುರಸಭೆ ಪ್ರಕಟಣೆ ತಿಳಿಸಿದೆ. ಜಲಮಂಡಳಿಯ ಅಧಿಕಾರಿಗಳ ಮನವಿ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ನೀರು ಸರಬರಾಜು ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು.ಇದಲ್ಲದೇ ಮುಂದಿನ 3 ರಿಂದ 4 ದಿನಗಳವರೆಗೆ ಕಾರ್ಕಳ ಪುರಸಭಾ ವ್ಯಾಪ್ತಿಯ ಕೆಲವೊಂದು ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದ್ದು ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸುವಂತೆ ಪುರಸಭೆ ಪ್ರಕಟಣೆ ತಿಳಿಸಿದೆ.

 

 

 

 

 

 

 

Leave a Reply

Your email address will not be published. Required fields are marked *