ಕಾರ್ಕಳ : ಕಾರುಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ಮುಡಾರು ಗ್ರಾಮದ ಬಜಗೋಳಿಯಲ್ಲಿ ಸೋಮವಾರ ನಡೆದಿದೆ.
ಬಜಗೋಳಿ ಕುಷ್ಮಾಂಡಿನಿ ಪೆಟ್ರೋಲ್ ಬಂಕ್ ಬಳಿ ಹಾದುಹೋಗಿರುವ ಕಾರ್ಕಳ ಧಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಅಶ್ವಥ್ ಎಂಬವರು ಕಾರಿನಲ್ಲಿ ಕಾರ್ಕಳದಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದ ವೇಳೆ ಎದುರಿಂದ ಬರುತ್ತಿದ್ದ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇನ್ನೊಂದು ಕಾರಿನ ಚಾಲಕ ಹಾಗೂ ಆತನ ಪತ್ನಿ ಗಾಯಗೊಂಡಿದ್ದು, ಎರಡೂ ಕಾರುಗಳು ಜಖಂಗೊಂಡಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














