ಹೆಬ್ರಿ: ಮಹೀಂದ್ರಾ ಪಿಕಪ್ ವಾಹನ ಹಾಗೂ ಮಾರುತಿ ಇಕೊ ಕಾರಿನ ನಡುವೆ ಡಿಕ್ಕಿಯಾಗಿ ಕಾರಿನಲ್ಲಿದ್ದ 8 ಜನರಿಗೆ ಗಾಯಗಳಾಗಿವೆ. ಹೆಬ್ರಿ ತಾಲೂಕಿನ ಬೇಳಂಜೆ ಹಾಲಿನ ಡೈರಿ ಬಳಿ ಬುಧವಾರ ಮಧ್ಯಾಹ್ನ 3 ಗಂಟೆಗೆ ಈ ಅಪಘಾತ ಸಂಭವಿಸಿದ್ದು, ಪಿಕಪ್ ಚಾಲಕ ಗುರುರಾಜ ಎಂಬಾತ ಕೋಳಿ ಸಾಗಾಟದ ವಾಹನವನ್ನು ಹೆಬ್ರಿ ಕಡೆಯಿಂದ ಗೋಳಿಯಂಗಡಿ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ಅಲ್ಬಾಡಿ ಕಡೆಯಿಂದ ಬರುತ್ತಿದ್ದ ಮಾರುತಿ ಇಕೋ ಕಾರಿಗೆ ಡಿಕ್ಕಿಯಾಗಿದೆ.
ಈ ಅಪಘಾತದಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸುಕುಮಾರ,ಆನಂದ,ಶೇಖರ,ಸುನAದಾ,ಶಾAತ,ನಾರಾಯಣ,ನವೀನ,ಕೃಷ್ಣ ಹಾಗೂ ಮುತ್ತಯ್ಯ ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಿಕಪ್ ಚಾಲಕನ ವೇಗದ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.