ಹೆಬ್ರಿ : ಲಯನ್ಸ್ ಜಿಲ್ಲೆ 317C ಇದರ 2024-25 ನೇ ಸಾಲಿನ ಪ್ರಾಂತೀಯ ಅಧ್ಯಕ್ಷರಾಗಿ ಹೆಬ್ರಿಯ ಖ್ಯಾತ ಉದ್ಯಮಿ ಬೇಳೆಂಜೆ ಹರೀಶ್ ಪೂಜಾರಿ ಆಯ್ಕೆಯಾಗಿದ್ದಾರೆ.
2012 ರಲ್ಲಿ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಗೆ ಸಾಮಾನ್ಯ ಸದಸ್ಯನಾಗಿ ಸೇರ್ಪಡೆಗೊಂಡ ಇವರು ಕ್ಲಬ್ ನ ಕಾರ್ಯದರ್ಶಿಯಾಗಿ, ಎರಡು ಬಾರಿ ಅಧ್ಯಕ್ಷರಾಗಿ, ವಲಯ ಕಾರ್ಯದರ್ಶಿಯಾಗಿ, ವಲಯ ಅಧ್ಯಕ್ಷರಾಗಿ, ಪ್ರಾಂತೀಯ ಕಾರ್ಯದರ್ಶಿಯಾಗಿ, ಅಲ್ಲದೆ ಜಿಲ್ಲಾ ಸಂಪುಟದಲ್ಲಿ ವಿವಿಧ ವಿಭಾಗಗಳಲ್ಲಿ ನಿರಂತರ ಸೇವೆಯನ್ನು ನೀಡಿ, ಹಲವಾರು ಪ್ರಶಸ್ತಿ ಪುರಸ್ಕಾರ ಪಡೆದಿರುತ್ತಾರೆ.
ಕುಂಟುತ್ತಾ ಸಾಗುತ್ತಿದ್ದ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಇವರ ಅಧ್ಯಕ್ಷೀಯ ಅವಧಿಯಲ್ಲಿ ಸಮಾನ ಮನಸ್ಸಿನ ಗ್ರಾಮೀಣ ಭಾಗದ ಸುಮಾರು 22 ಕ್ರಿಯಾಶೀಲ ಸದಸ್ಯರನ್ನು ಕ್ಲಬ್ ಗೆ ಸೇರಿಸಿ, ಕ್ಲಬ್ ನ ಚಿತ್ರಣವನ್ನೇ ಬದಲಾಯಿಸಿರುತ್ತಾರೆ.
ಹೆಬ್ರಿ ಪರಿಸರದ ಹಲವಾರು ಧಾರ್ಮಿಕ, ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ, ಅಧ್ಯಕ್ಷರಾಗಿ ಸೇವೆ ನೀಡುತ್ತಿರುವ ಇವರು, ಸುಮಾರು 20 ವರ್ಷಗಳಿಂದ ಪ್ರಿಂಟಿಂಗ್ ಪ್ರೆಸ್, ಪ್ಲೆಕ್ಸ್ ಬ್ಯಾನರ್ ಉದ್ಯಮವನ್ನು ನಡೆಸುತ್ತಿದ್ದು, ಎಲ್ಲರಿಗೂ ಚಿರಪರಿಚಿತರಾಗಿ ಕೊಡುಗೈದಾನಿಯಾಗಿರುತ್ತಾರೆ.