Share this news

ಕಾರ್ಕಳ: ಕಾರ್ಕಳ ತಾಲೂಕಿನ ಬೆಳ್ಮಣ್ ನಲ್ಲಿ ಸಂಬಳದ ವಿಚಾರವಾಗಿ ನಡೆದ ಜಗಳ ತಾರಕಕ್ಕೇರಿ ಒಬ್ಬ ಇನ್ನೊಬ್ಬನಿಗೆ ಬೀಯರ್ ಬಾಟ್ಲಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ.

ಅ.16 ರಂದು ಬೋಳದ ಪ್ರವೀಣ್‌ ಕುಮಾರ್‌ ಹಾಗೂ ಅವರ ಪರಿಚಯದ ಸಂತೋಷ್‌ ಎಂಬವರು ಬೆಳ್ಮಣ್‌ ಪೇಟೆಯಲ್ಲಿರುವ ಸೂರಜ್‌ ಬಾರ್‌ ಎಂಡ್‌ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಮದ್ಯಪಾನ ಮಾಡಿ ಬೆಳ್ಮಣ್‌ ಬಸ್‌ ನಿಲ್ದಾಣಕ್ಕೆ ಬಂದಿದ್ದರು.

ಈ ವೇಳೆ ಪ್ರವೀಣ್ ಕುಮಾರ್ ಸಂತೋಷ್‌ನ ಬಳಿ ಬಾಕಿ ಇರುವ ಸಂಬಳ ರೂ. 250/- ಕೊಡುವಂತೆ ಕೇಳಿದಕ್ಕೆ ಇಬ್ಬರಿಗೂ ಮಾತುಕತೆ ಬೆಳೆದು ಸಂತೋಷ್ ಬಾರ್‌ನಿಂದ ಕುಡಿಯಲು ತಂದಿದ್ದ ಬಿಯರ್‌ ಬಾಟಲಿನಿಂದ ಪ್ರವೀಣ್ ತಲೆಗೆ ಜೋರಾಗಿ ಹೊಡೆದಿದ್ದಾನೆ. ಅಲ್ಲದೇ ಇನ್ನು ಮುಂದೆ ಬಾಕಿ ಇದ್ದ ಸಂಬಳ ಕೇಳಿದರೆ ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆಂದು ಪ್ರವೀಣ್ ಕುಮಾರ್ ದೂರು ನೀಡಿದ್ದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *