ಕಾರ್ಕಳ: ಬೆಟ್ಟಿಂಗ್ ಆ್ಯಪ್ ಮೂಲಕ ಇತರರೊಂದಿಗೆ ಸೇರಿಕೊಂಡು ಆನ್‌ಲೈನ್ ಬೆಟ್ಟಿಂಗ್ ಆಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಝೀರ್ ಬಂಧಿತ ಆರೋಪಿ.
ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಎಂ.ಎಸ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಯವರೊAದಿಗೆ ಬೆಳ್ಮಣ್ ಗ್ರಾಮದ ಬೆಳ್ಮನ್ ಚರ್ಚ್ ಬಳಿ ನಜೀರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಆನ್‌ಲೈನ್ ಮೂಲಕ M.yolo247.site/login ಎಂಬ ಸೈಟ್‌ನಲ್ಲಿ ಬೆಟ್ಟಿಂಗ್ ಆಪ್ ಮೂಲಕ ಇರರರೊಂದಿಗೆ ಸೇರಿಕೊಂಡು ಆನ್‌ಲೈನ್ ಬೆಟ್ಟಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಆರೋಪಿಯ ಬಳಿ ಇದ್ದ ಇಂಡಿಯನ್ ಓವರ್ ಸೀಸ್ ಬ್ಯಾಂಕಿನ 5 ಡೆಬಿಟ್ ಕಾರ್ಡ್ ಗಳು ಮತ್ತು ಕೆನರಾ ಬ್ಯಾಂಕಿನ 1 ಡೆಬಿಟ್ ಕಾರ್ಡ್ , ಸ್ಯಾಮ್‌ಸಂಗ್ ಮೊಬೈಲ್ ಫೋನ್ ರೂ. 30,000 ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.