Share this news

ಕಾರ್ಕಳ: ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ಶನಿವಾರ ನಡೆದಿದೆ.

ಮುಲ್ಲಡ್ಕ ಗ್ರಾಮದ ಲಾರೆನ್ಸ್ ಹೆರಾಲ್ಡ್ ಡಿಮೆಲ್ಲೋ (56) ಎಂಬವರು ಶನಿವಾರ ಬೆಳಿಗ್ಗೆ ಮನೆಯಲ್ಲಿ ಹಂದಿಗೂಡಿನ ಹತ್ತಿರ ಕೆಲಸ ಮಾಡುತ್ತಿದ್ದಾಗ ಕುಸಿದು ಬಿದ್ದವರನ್ನು ಅನಿಲ್ ಎಂಬುವವರು ಚಿಕಿತ್ಸೆಗಾಗಿ ಬಗ್ಗೆ ಬೆಳ್ಮಣ್ ನ ಕ್ಲಿನಿಕ್ ಒಂದಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಕಾರ್ಕಳದ ಡಾ ಟಿಎಂಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳಗೆ ಲಾರೆನ್ಸ್ ಹೆರಾಲ್ಡ್ ಡಿಮೆಲ್ಲೋರವರು ಮೃತಪಟ್ಟಿರುತ್ತಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *