ಕಾರ್ಕಳ: ಕಾರ್ಕಳ ತಾಲೂಕಿನ ಬೆಳ್ಮಣ್ ನಲ್ಲಿರುವ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಬೀಗ ಮುರಿದ ಕಳ್ಳರು ಒಂದು ಲಕ್ಷಕ್ಕೂ ಮಿಕ್ಕಿ ನಗದು ದೋಚಿ ಡಿವಿಯರ್ಗಳನ್ನು ಕದ್ದು ಸಿಸಿಟಿವಿ ಗಳನ್ನು ಹಾಳುಗೈದು ಪರಾರಿಯಾಗಿದ್ದಾರೆ.
ಫೆ.21 ರಂದು ರಾತ್ರಿ ಶಾಲೆಯ ಮುಖ್ಯೋಪಾಧ್ಯಾಯರ ಕಛೇರಿಯ ಬೀಗವನ್ನು ಮುರಿದು ಎರಡು ಕಪಾಟಿನ ಮತ್ತು 2 ಮೇಜಿನ ಡ್ರಾವರನ್ನು ಒಡೆದು ಅದರಲ್ಲಿದ್ದ 1,50,000/- ನಗದು ಮತ್ತು 3 ಡಿವಿಯರ್ಗಳನ್ನು ಕಳವು ಮಾಡಿರುವುದಲ್ಲದೆ ಶಾಲೆಯ ಸಿಸಿಟಿವಿಯನ್ನು ಹಾಳು ಮಾಡಿರುವುದಾಗಿ ಲಿಡ್ವಿನ್ ಅರಾನ್ಹ ದೂರು ನೀಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

