ಕಾರ್ಕಳ: ಕೆಲಸಗಾರ ಟಿಪ್ಪರ್ ಚಾಲಕ ಮತ್ತು ಮಾಲೀಕನ ನಡುವೆ ಸಂಬಳದ ವಿಚಾರವಾಗಿ ತಕರಾರು ನಡೆದಿದ್ದು, ಮಾಲೀಕ ಕೆಲಸಗಾರನಿಗೆ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್‌ನಲ್ಲಿ ಫೆ.13 ರಂದು ನಡೆದಿದೆ.
ಬೆಳ್ಮಣ್ ನ ಅರ್ಜುನ್ ಎಂಬವರು ಯೋಗೀಶ್ ಎಂಬವರ ಟಿಪ್ಪರ್‌ನಲ್ಲಿ ಚಾಲಕ ಕೆಲಸ ಮಾಡುತ್ತಿದ್ದು, ಸಂಬಳ ಕೊಡದೇ ಬಾಕಿ ಇಟ್ಟಿದ್ದರು. ಅರ್ಜುನ್ ಮತ್ತೆ ಮತ್ತೆ ಕೇಳಿದಾಗ ನವೆಂಬರ್‌ನಲ್ಲಿ ಹಣ ನೀಡಿದ್ದರು. ಈ ಬಳಿಕ 2025ರ ಫೆ.13 ರಂದು ಅರ್ಜುನ್ ಬೆಳ್ಮಣ್ ಗ್ರಾಮದ ಗಿರಿ ವೈನ್ಸ್ ಶಾಪ್ ಬಳಿ ಮಾವ ಶಿವಣ್ಣ ರವರ ಹೋಟೆಲ್ ಗೆ ಹೋಗಿದ್ದ ಸಮಯದಲ್ಲಿ ಹೊಟೇಲ್ ನಲ್ಲಿದ್ದ ಯೋಗಿಶ್ ಅರ್ಜುನ್‌ಗೆ ಶಬ್ದಗಳಿಂದ ಬೈದು ಕೈಯಿಂದ ಮುಖಕ್ಕೆ ಹಲ್ಲೆ ನಡೆಸಿದ್ದಾರೆ ಅಲ್ಲದೇ ಅವರೊಂದಿಗಿದ್ದ ಇನ್ನೋರ್ವ ವ್ಯಕ್ತಿ ವ್ಯಕ್ತಿ ಸೋಡ ಬಾಟಲಿಯಿಂದ ಅರ್ಜುನ್‌ಗೆ ಹೊಡೆದಿದ್ದಾರೆ. ಆ ವೇಳೆ ಅರ್ಜುನ್ ಹೋಟೆಲ್‌ನಿಂದ ಹೊರಗೆ ಬಂದಿದ್ದು, ಜೊತೆಗಿದ್ದ ಉಳಿದವರು ಕೂಡ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆಂದು ಅರ್ಜುನ್ ದೂರು ನೀಡಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.