Share this news

ಕಾರ್ಕಳ: ಕಾರ್ಕಳ ತಾಲೂಕಿನ ಬೆಳ್ಮಣ್ ಪೇಟೆಯಲ್ಲಿನ ಮಮ್ಮಿ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದ ಉಡುಪಿಯ ಕಪ್ಪೆಟ್ಟು ನಿವಾಸಿ ರಮೇಶ್ (45) ಎಂಬವರು ವಿಪರೀತ ಮದ್ಯಪಾನ ಮಾಡಿಕೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಪಡುಬೆಳ್ಳೆಯ ಭಾಸ್ಕರ ಎಂಬವರು ನಡೆಸುತ್ತಿದ್ದ ಮಮ್ಮಿ ಹೊಟೇಲಿನಲ್ಲಿ ಕಳೆದ ಕೆಲ ದಿನಗಳಿಂದ ರಮೇಶ್ ಕೆಲಸ ಮಾಡಿಕೊಂಡಿದ್ದರು. ವಿಪರೀತ ಮದ್ಯಪಾನದ ಚಟ ಹೊಂದಿದ್ದ ಅವರು ಗುರುವಾರ ಹೊಟೇಲ್ ಕೆಲಸಕ್ಕೆ ರಜೆ ಹಾಕಿ ಹೋದವರು ಮಧ್ಯಾಹ್ನ ಬೆಳ್ಮಣ್ ಪೇಟೆಯಲ್ಲಿನ ವಿನ್ಯಾಸ್ ಸೆಲೂನ್ ಬಳಿ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

 

 

 

 

 

 

 

 

 

 

Leave a Reply

Your email address will not be published. Required fields are marked *