Share this news

ಉಡುಪಿ:ಅಕ್ರಮ ಗಣಿಗಾರಿಕೆಯಲ್ಲಿ ಬಂಧಿತನಾಗಿ ಜೈಲು ಸೇರಿದ ಬಿಜೆಪಿ ಕಾರ್ಯಕರ್ತನ ಪರವಾಗಿ ಬೆಳ್ತಂಗಡಿಯ ಶಾಸಕ ಹರೀಶ್ ಪುಂಜಾ ಪೊಲೀಸರ ವಿರುದ್ಧ ಅವಾಚ್ಯವಾಗಿ ನಿಂದಿಸಿದ ಪ್ರಕರಣ ಅತ್ಯಂತ ಖಂಡನೀಯ ಎಂದು ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಕಿರಣ್ ಕುಮಾರ್ ಹೆಗ್ಡೆ ಹೇಳಿದ್ದಾರೆ.
ಕಾನೂನಿಗೆ ಗೌರವ ನೀಡದೇ,ಶಾಸಕರು ಈ ದುರ್ವರ್ತನೆ ದಬ್ಬಾಳಿಕೆಯ ಪರಮಾವಧಿಯಾಗಿದೆ.ಇದನ್ನು ಬೆಳ್ತಂಗಡಿ ಜನರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಶಾಲೆ-ಕಾಲೇಜುಗಳು ಶುರುವಾಗುತ್ತಿದೆ. ಕೀರ್ತಿಗೊಂದು ಮತ್ತು ಆರತಿಗೊಂದು ಮಗಳು ಎರಡು ಸಾಕು ಎನ್ನುವ ಕಾಂಗ್ರೆಸ್ ನುಡಿಮುತ್ತು ಮಾಯವಾಗಿ ಅನ್ಯಧರ್ಮಿಯರ ಜನಸಂಖ್ಯೆ ಹೆಚ್ಚಾಗಿದೆ ಎಂದು ಶ್ಲೋಗನ್‌ಗಳು ಶುರುವಾಗಿದೆ.

ವನಮಹೋತ್ಸವ ಆಚರಣೆ ಮಾಡಿ ಎಂದು ಕಾಂಗ್ರೆಸ್ ಕಾಲದಲ್ಲಿ ಶಾಲೆಗಳಲ್ಲಿ ಹೇಳುತ್ತಿದ್ದರು. ರಸ್ತೆ ಅಗಲೀಕರಣದಿಂದಾಗಿ ಅಂದು ನೆಟ್ಟ ಮರಗಳನ್ನು ಇಂದು ಕಡಿಯುತ್ತಿದ್ದಾರೆ ಅಡಿಕೆ, ತೆಂಗು ಹಿಂಗಾರಗಳು ಸುಟ್ಟು ಹೋಗಿದೆ. ಮಾವು ಬೆಳೆ ಕಡಿಮೆ ಆಗಿದೆ. ಗೇರುಬೀಜ ಇಲ್ಲವೇ ಇಲ್ಲ. ಹಲಸಿನ ಕಾಯಿ ಕಡಿಮೆ. ಹೊಸ ಹಣ್ಣಿನ ತಳಿಗಳನ್ನು ಬೆಳೆದ ರೈತರು ಕಂಗಾಲಾಗಿದ್ದಾರೆ. ಇದು ಮನುಕುಲಕ್ಕೆ ಅಪಾಯ ಇದನ್ನು ಕೇಳುವವರಿಲ್ಲ ಇದರ ಕುರಿತು ಧ್ವನಿ ಎತ್ತದ ಶಾಸಕರು ಅನಗತ್ಯ ವಿಚಾರಗಳಿಗೆ ಮೂಗು ತೂರಿಸುತ್ತಿದ್ದಾರೆ ಎಂದು ಕಿರಣ್ ಹೆಗ್ಡೆ ಆರೋಪಿಸಿದ್ದಾರೆ.

 

 

 

 

 

 

 

 

 

 

                        

                          

 

Leave a Reply

Your email address will not be published. Required fields are marked *