Share this news

ಬೆಂಗಳೂರು : ಬಿಗ್ ಬಾಸ್ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ಸೀಜ್ ಆಗಿರುವ ಹಿನ್ನೆಲೆಯಲ್ಲಿ ಈಗಲ್ಟನ್ ರೆಸಾರ್ಟ್ ಗೆ 17 ಸ್ಪರ್ಧಿಗಳನ್ನು ಸ್ಥಳಾಂತರ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿ ಜಾಲಿವುಡ್ ಸ್ಟುಡಿಯೋಸ್ ಹಾಕಿದ್ದ ಬಿಗ್ ಬಾಸ್ ಮನೆಯ ನಿರ್ಮಾಣದಲ್ಲಿ ಸಂಪೂರ್ಣವಾಗಿ ನಿಯಮ ಉಲ್ಲಂಘಿಸಲಾಗಿದೆ ಎಂದು ಜಿಲ್ಲಾಡಳಿತ ಬೀಗಮುದ್ರೆ ಹಾಕಿದ್ದು, ಜಾಲಿವುಡ್ ಆಡಳಿತ ಮಂಡಳಿಗೆ ಬಿಕ್ ಶಾಕ್ ನೀಡಿದೆ.

ಸರ್ಕಾರದ ಆದೇಶವನ್ನು ಪ್ರಶ್ನಿಸಿ ಇಂದು ಜಾಲಿವುಡ್ ಸ್ಟುಡಿಯೋಸ್ ಹೈಕೋರ್ಟ್ ಮೊರೆ ಹೋಗಲಿದೆ ಎಂದು ತಿಳಿದುಬಂದಿದೆ. ಇಂದೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಬಿಗ್ ಬಾಸ್ ನ ಎಲ್ಲಾ 17 ಮಂದಿ ಸ್ಪರ್ಧಿಗಳು ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈಗಲ್ ಟನ್ ರೆಸಾರ್ಟ್ ನಲ್ಲಿ ಇರುತ್ತಾರೆ ಎನ್ನಲಾಗಿದೆ.

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶುರುವಾದ ಎರಡನೇ ವಾರಕ್ಕೆ ಬಿಗ್ ಬಾಸ್ ಹೌಸ್ ಬಂದ್ ಆಗಿದೆ. ಬಿಗ್ ಬಾಸ್ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋ ಸೀಜ್ ಮಾಡಲಾಗಿದೆ. ರಾಮನಗರದ ಬಿಡದಿ ಬಳಿಯ 35 ಎಕರೆ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋದಲ್ಲಿ ಪ್ರತ್ಯೇಕ ಸೆಟ್ ಗಳನ್ನು ಹಾಕಿ ಕನ್ನಡ ಬಿಗ್ ಬಾಸ್ ಸೀಜನ್ -12ನ್ನು ನಡೆಸಲಾಗುತ್ತಿತ್ತು. ಆದರೆ ಬಿಗ್ ಬಾಸ್ ಶೋ ಹಾಗೂ ಸೆಟ್ ಗಳಲ್ಲಿ ಪರಿಸರ ನಿಯಮ ಉಲ್ಲಂಘನೆ ಮಾಡಲಾಗಿದೆ. ಜಾಲಿವುಡ್ ಸ್ಟುಡಿಯೋ ನಿಯಮ ಉಲ್ಲಂಘನೆ ಮಾಡಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿತ್ತು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *