ನವದೆಹಲಿ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 150 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಅವರು ಇಂದು ಭಾಗಲ್ಪುರದಲ್ಲಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿಯವರು 400ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂದು ಹೇಳುತ್ತಲೇ ಇದ್ದಾರೆ,ಆದರೆ ಬಿಜೆಪಿ 150 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ನಾನು ಸ್ಪಷ್ಟಪಡಿಸುತ್ತೇನೆ. 150 ಕ್ಕಿಂತ ಒಂದು ಸ್ಥಾನವನ್ನೂ ಹೆಚ್ಚಿಗೆ ಗೆಲ್ಲಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ಅಗ್ನಿವೀರ್ ಯೋಜನೆಯನ್ನು ಕೊನೆಗೊಳಿಸುವುದಾಗಿ ಭರವಸೆ ನೀಡಿದ ರಾಹುಲ್ ಗಾಂಧಿ, ಭಾರತಕ್ಕೆ ಎರಡು ರೀತಿಯ ಹುತಾತ್ಮರ ಅಗತ್ಯವಿಲ್ಲ ಎಂದು ಹೇಳಿದರು. ಇಂಡಿಯಾ ಮೈತ್ರಿ ಸರ್ಕಾರ ಬಂದ ಕೂಡಲೇ ನಾವು ಅಗ್ನಿವೀರ್ ಯೋಜನೆಯನ್ನು ಕೊನೆಗೊಳಿಸುತ್ತೇವೆ. ಭಾರತಕ್ಕೆ ಎರಡು ರೀತಿಯ ಹುತಾತ್ಮರ ಅಗತ್ಯವಿಲ್ಲ ಎಂದರು.
.