Share this news

ಕಾರ್ಕಳ : ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನಾಚರಣೆಯನ್ನು ಏ. 6ರಂದು ಕಾರ್ಕಳದ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು. ಭಾರತೀಯ ಜನಸಂಘದ ಅವಧಿಯಿಂದ ಭಾಜಪಾದಲ್ಲಿ ಕಾರ್ಯ ನಿರ್ವಹಿಸಿರುವ ವಿಜೇಂದ್ರ ಕಿಣಿಯವರು ಭಾರತಾಂಬೆ ಮತ್ತು ಪಂಡಿತ್ ದೀನ್ ದಯಾಳ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಭಾರತೀಯ ಜನಸಂಘವು 1980ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಮರು ನಾಮಕರಣಗೊಂಡಿದ್ದು, ಎಂ.ಸಿ. ಚಾಗ್ಲಾ ರವರು ಉದ್ಘಾಟಿಸಿದ್ದರು.
1998-2004 ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನಡೆಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು. 2014 ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ‌ ಹಾಗೂ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ಭಾರತೀಯ ಜನತಾ ಪಾರ್ಟಿ ಇಂದು 303 ಕ್ಷೇತ್ರಗಳಲ್ಲಿ ಅಧಿಕಾರ ನಡೆಸುತ್ತಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ ಎಂದರು.

ಬಿಜೆಪಿ ವಕ್ತಾರ ರವೀಂದ್ರ ಮೊಯಿಲಿ ಮಾತನಾಡಿ, ವಿಜೇಂದ್ರ ಕಿಣಿಯವರು ಭಾರತೀಯ ಜನತಾ ಪಾರ್ಟಿಯಲ್ಲಿ ಖಜಾಂಚಿಯಾಗಿ ಕರ್ತವ್ಯ ನಿಭಾಯಿಸಿದವರು. ಹಿಂದುತ್ವಕ್ಕೆ ಒತ್ತುಕೊಟ್ಟು ಜನಸಂಘದ ದಿನದಿಂದಲೂ ಇಂದಿನವರೆಗೆ ಬಾಜಪದಲ್ಲಿ ಅವರ ಕಾರ್ಯನಿರ್ವಹಣೆಯನ್ನು ಮಾಡುತ್ತಾ ಬಂದಿದ್ದು, ಹುಮ್ಮಸ್ಸು ಮಾತ್ರ ಇನ್ನು ಕುಂದಿಲ್ಲ. ಸಂಘದ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರಂತೆಯೆ ಇಂದಿನ ಯುವನಾಯಕರು ಪಕ್ಷದ ನಿಯಮಾಳಿಗಳಿಗೆ ಬದ್ಧರಾಗಿ, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಸುವ ಕಾರ್ಯ ಮಾಡೋಣ ಎಂದರು.
ಸ್ಥಾಪನಾ ದಿನದ ಅಂಗವಾಗಿ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ ಮಿಯ್ಯಾರಿನ ಶೇಖರ ಪೂಜಾರಿಯವರ ಕುಟುಂಬಕ್ಕೆ ಸಾಂತ್ವಾನ ಹೇಳಿ, ಔಷಧೋಪಚಾರಗಳಿಗೆ ಧನಸಹಾಯವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌, ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಹಿರಿಯರಾದ ರಾಮಚಂದ್ರ ನಾಯಕ್‌, ವೈ. ಸುಂದರ ಹೆಗ್ಡೆ, ಬಾಜಪ ಮಂಡಲದ ಪ್ರಧಾನ ಕಾರ್ಯದರ್ಶಿ ಸತೀಶ್‌ ಪೂಜಾರಿ, ಉಪಾಧ್ಯಕ್ಷ ಅನಂತಕೃಷ್ಣ ಶೆಣೈ, ಕಾರ್ಯದರ್ಶಿ ಪ್ರವೀಣ್‌ ಸಾಲ್ಯಾನ್‌,ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಜ್ಯೋತಿ ರಮೇಶ್‌, ಯುವಮೋರ್ಚಾ ಅಧ್ಯಕ್ಷ ರಾಕೇಶ್‌ ಶೆಟ್ಟಿ, ‌ಮಿಯ್ಯಾರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸನ್ಮತಿ ನಾಯಕ್‌, ಪುರಸಭಾ ಸದಸ್ಯರು ಮತ್ತು ಪಕ್ಷದವರ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *