ನವದೆಹಲಿ : ಲೋಕಸಭಾ ಚುನಾವಣೆಯ ಕಾವು ದಿನೇದಿನೇ ಏರುತ್ತಿದ್ದು,ಈ ನಡುವೆ ಬಿಜೆಪಿಯ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನ ಬಿಡುಗಡೆ ಮಾಡಿದೆ.
ಮಾಜಿ ಐಪಿಎಸ್ ಅಧಿಕಾರಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಹಾಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದು, ಚೆನ್ನೈ ದಕ್ಷಿಣದಿಂದ ತಮಿಳಿಸೈ ಸೌಂದರರಾಜನ್,ಚೆನ್ನೈ ಸೆಂಟ್ರಲ್ ಕ್ಷೇತ್ರದಿಂದ ವಿನೋಜ್.ಪಿ.ಸೆಲ್ವಂ, ನೀಲಗಿರಿಯಿಂದ ಎಲ್.ಮುರುಗನ್, ವೆಲ್ಲೂರಿನಿಂದ ಡಾ.ಎ.ಸಿ ಷಣ್ಮುಗಂ,ಕೃಷ್ಣಗಿರಿ ಕ್ಷೇತ್ರದಿಂದ ಪಿ.ನರಸಿಂಹನ್,ನೀಲಗಿರೀಸ್ ಕ್ಷೇತ್ರದಿಂದ ಡಾ.ಎಲ್ ಮುರುಗನ್ ಸೇರಿದಂತೆ 9 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ.