ಕಾರ್ಕಳ:ಕಾಪು ಪುರಸಭೆ ಆಡಳಿತದಲ್ಲಿ ಬಿಜೆಪಿ ಹಾಗೂ SDPI ಸೇರಿ ಅಧಿಕಾರ ಹಿಡಿದಿದ್ದು ಈ ಬಗ್ಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಯಾಕೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶುಭದ ರಾವ್ ಪ್ರಶ್ನಿಸಿದ್ದಾರೆ.
ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ ,SDPI ಆಡಳಿತದ ಬಗ್ಗೆ ವಿರೋಧ ಹೇಳಿಕೆ ನೀಡಿದ ಶಾಸಕ ಸುನೀಲ್ ಕುಮಾರರಿಗೆ ಕಾಪುವಿನಲ್ಲಿ ತಮ್ಮ ಸ್ವಪಕ್ಷೀಯರಿಂದಲೇ ಮಂಗಳಾರತಿಯಾಗಿದೆ, ಈಗ ಬಗ್ಗೆ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಆಗ್ರಹಿಸಿದ್ದಾರೆ.
SDPI ಬಗ್ಗೆ ಕಾಂಗ್ರೆಸ್ ದ್ವಂದ್ವ ನಿಲುವು ತಾಳಿ ತಮಗೆ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿದೆ, ನಿಷೇಧಿತ PFI ಸಂಘಟನೆ ಜತೆ ಅಂತರ್ ಸಂಬಂಧವಿರುವ SDPI ಜೊತೆ ಕಾಂಗ್ರೆಸ್ ಸಂಬಂಧ ಅಪಾಯದ ಸೂಚನೆ ಎಂದಿರುವ ಶಾಸಕರು ಕಾಪು ಪುರಸಭೆಯಲ್ಲಿ SDPI ಜೊತೆ ಅಧಿಕಾರ ಹಂಚಿಕೊಂಡಿರುವುದು ಅಪಾಯದ ಸೂಚನೆಯೇ? ಎಂಬುದನ್ನು ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ಇತೀಚಿನ ದಿನಗಳಲ್ಲಿ ಶಾಸಕ ಸುನೀಲ್ ಕುಮಾರ್ ಹೇಳಿಕೆ ಮತ್ತು ಭಾಷಣಗಳೇ ತಮಗೆ ಮುಳುವಾಗುತಿದೆ ಇದು ಮುಂದಿನ ಯಾವುದೋ ಒಂದು ಹಿನ್ನಡೆಯ ಸೂಚನೆಯನ್ನು ನೀಡುವಂತಿದೆ ಮಾತನಾಡುವಾಗ ಎಚ್ಚರವಹಿಸಿದರೆ ಒಳ್ಳೆಯದು ಎಂದು ಶುಭದ ರಾವ್ ಸಲಹೆ ನೀಡಿದ್ದಾರೆ.
`