ಬೆಳಗಾವಿ: ರಾಜ್ಯದ ಪ್ರಸಿದ್ದ ರಾಮಮಂದಿರವನ್ನು ಬಾಂಬ್ ಇಟ್ಟು ಸ್ಪೋಟಿಸೋದಾಗಿ ಅಲ್ಲಾ ಹು ಹೆಸರಿನಲ್ಲಿ ದುಷ್ಕರ್ಮಿಗಳು ಬೆದರಿಕೆ ಪತ್ರವನ್ನು ಕಳಿಸಿರೋ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿರುವಂತ 101 ವರ್ಷಗಳ ಇತಿಹಾಸ ಹೊಂದಿರುವ ರಾಮಮಂದಿರವನ್ನು ಸ್ಪೋಟಿಸೋದಾಗಿ ಅಲ್ಲಾ ಹು ಹೆಸರಿನಲ್ಲಿ ಹಿಂದಿಯಲ್ಲಿ ದುಷ್ಕರ್ಮಿಗಳು ಬೆದರಿಕೆ ಪತ್ರವನ್ನು ಕಳುಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿರುವಂತ ಶ್ರೀರಾಮ ಮಂದಿರವನ್ನು ಸ್ಪೋಟಿಸೋದಾಗಿ ಫೆಬ್ರವರಿ.7 ಹಾಗೂ ಫೆಬ್ರವರಿ 28ರಂದು ಅಲ್ಲಾ ಹು ಹೆಸರಿನಲ್ಲಿ ದುಷ್ಕರ್ಮಿಗಳಿಂದ ಬೆದರಿಕೆ ಪತ್ರವನ್ನು ಕುಳುಹಿಸಲಾಗಿದೆ.
ಫೆಬ್ರವರಿ.7ರಂದು ಕಳುಹಿಸಲಾಗಿರುವ ಮೊದಲ ಪತ್ರವು ರಾಮಮಂದಿರದ ಗರ್ಭಗುಡಿಯಲ್ಲಿ ಪತ್ತೆಯಾಗಿದೆ. ಫೆಬ್ರವರಿ.2ರಂದು ಎರಡನೇ ಬೆದರಿಕೆ ಪತ್ರವು ಹನುಮಾನ್ ಗುಡಿಯಲ್ಲಿ ಸಿಕ್ಕಿದೆ. ಈ ಪತ್ರಗಳನ್ನು ಪೊಲೀಸರಿಗೆ ದೇವಾಲಯದ ಅರ್ಚಕರು ನೀಡಿದ್ದು, ಈ ಸಂಬAಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಬೆಂಗಳೂರು ಸ್ಪೋಟದ ಬೆನ್ನಲ್ಲೇ ಶ್ರೀರಾಮಮಂದಿರ ಸ್ಪೋಟಿಸೋದಾಗಿ ಕಳುಹಿಸಿರೋ ಬೆದರಿಕೆ ಪತ್ರ ಜನರಲ್ಲಿ ಆತಂಕವನ್ನು ಹುಟ್ಟಿಸಿದೆ.
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.