ಕಾರ್ಕಳ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಕಾರ್ಕಳದಿಂದ ಮೆರವಣಿಗೆಯ ಮೂಲಕ ಹೊರೆಕಾಣಿಕೆಯನ್ನು ಸಮರ್ಪಿಸಲಿದ್ದು, ಹೊರೆ ಕಾಣಿಕೆಯನ್ನು ನೀಡುವವರು ಕಾರ್ಕಳ ಮಾರಿಯಮ್ಮ ದೇವಸ್ಥಾನದಲ್ಲಿ ಫೆಬ್ರವರಿ 22 ಶನಿವಾರ ಸಂಜೆ 7 ಗಂಟೆಯ ಒಳಗೆ ತಲುಪಿಸಬೇಕು.
ಭಕ್ತರು ಅನ್ನಸಂಪರ್ಪಣೆಗೆ ಬೇಕಾಗುವ ಅಕ್ಕಿ, ಸಿಪ್ಪೆಯ ತೆಂಗಿನ ಕಾಯಿ, ಸೀಯಾಳ ,ಸಕ್ಕರೆ, ಬೆಲ್ಲ, ತೆಂಗಿನ ಎಣ್ಣೆ, ನಂದಿನಿ ತುಪ್ಪ, ತೊಗರಿ ಬೇಳೆ, ಉದ್ದಿನ ಬೇಳೆ ,ದವಸ ಧಾನ್ಯಗಳು, ಸಂಬಾರ ದಿನಸಿಗಳು, ತರಕಾರಿ ಹಣ್ಣು ಹಂಪಲು, ಬಾಳೆ ಎಲೆ, ಹಾಳೆ ತಟ್ಟೆ ಹಾಗೂ ಕ್ಷೇತ್ರದಲ್ಲಿ ನಡೆಯುವ ಸತ್ಕರ್ಮಗಳಿಗೆ ವಿನಿಯೋಗವಾಗುವ ಪರಿಕರ ಹಾಗೂ ಇನ್ನಿತರ ಪರಿಕರಗಳನ್ನು ನೀಡಬಹುದಾಗಿದೆ.
ಫೆಬ್ರವರಿ 23ರ ಆದಿತ್ಯವಾರ ಮಧ್ಯಾಹ್ನ 1.30 ಕ್ಕೆ ಕಾರ್ಕಳ ಅನಂತಶಯನ ದೇವಸ್ಥಾನದಿಂದ ಹಸಿರು ಹೊರೆ ಕಾಣಿಕೆ ಮೆರವಣಿಗೆ ಹೊರಡಲಿದ್ದು ಮೆರವಣಿಗೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕಾಪು ಮಾರಿಯಮ್ಮ ಹೊರೆ ಕಾಣಿಕೆ ಸಮಿತಿ ಕಾರ್ಕಳ ಇದರ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ವಿಜಯ- 9845095526, ದಿನೇಶ್ ದೇವಾಡಿಗ- 8217630567 ಇವರನ್ನು ಸಂಪರ್ಕಿಸಬಹುದಾಗಿದೆ.
