ಕಾರ್ಕಳ: ಪೆಟ್ರೋಲ್ ಖಾಲಿಯಾದ ಹಿನ್ನೆಲೆಯಲ್ಲಿ ಬೈಕ್ ಸವಾರ ತನ್ನ ಬೈಕನ್ನು ರಸ್ತೆ ಬದಿಯಲ್ಲಿ ತಳ್ಳಿಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿಯಾಗಿ ಸವಾರ ಸೇರಿದಂತೆ ಸಹಸವಾರ ಗಾಯಗೊಂಡ ಘಟನೆ ಕಾರ್ಕಳದ ಜೋಡುರಸ್ತೆಯಲ್ಲಿ ಸಂಭವಿಸಿದೆ.
ಕಾರ್ಕಳದ ಕಾಬೆಟ್ಟು ನಿವಾಸಿ ಪ್ರದೀಪ್ ಎಂಬವರು ಶುಕ್ರವಾರ ರಾತ್ರಿ ಅಯ್ಯಪ್ಪನಗರದ ವೆಲ್ಡಿಂಗ್ ಶಾಪ್ ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುವಾಗ ಬೈಕಿನಲ್ಲಿ ಪೆಟ್ರೋಲ್ ಮುಗಿದ ಹಿನ್ನೆಲೆಯಲ್ಲಿ ಜೋಡುರಸ್ತೆ ಪೆಟ್ರೋಲ್ ಬಂಕಿಗೆ ಬೈಕನ್ನು ತಳ್ಳಿಕೊಂಡು ಬಂದು ಜೋಡುರಸ್ತೆಯ ನಡಿಮಾರ್ ಬಂಕ್ ಬಳಿ ತಲುಪಿದಾಗ ಅಯ್ಯಪ್ಪನಗರ ಕಡೆಯಿಂದ ವೇಗವಾಗಿ ಬಂದ ಬೈಕ್ ಪ್ರದೀಪ್ ಅವರ ಬೈಕಿಗೆ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮಣಿಕಂಠ ಹಾಗೂ ಭರತ್ ಎಂಬವರು ಗಾಯಗೊಂಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ