Share this news

ಕಾರ್ಕಳ:ಕ್ರಿಯೇಟಿವ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಎ ಫೌಂಡೇಶನ್ ವತಿಯಿಂದ C.A ಹಾಗೂ C.S.E.E.T ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಈ ಕಾರ್ಯಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಚಾರ್ಟರ್ಡ್ ಅಕೌಂಟೆಂಟ್ ಪ್ರದೀಪ್ ಜೋಗಿ ಭಾಗವಹಿಸಿ ಮಾತನಾಡಿ, ಪ್ರಸ್ತುತ ವಿದ್ಯಮಾನದಲ್ಲಿ ಚಾರ್ಟರ್ಡ್‌ ಅಕೌಂಟ್‌ ಕೋರ್ಸ್‌ ಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಕಾಲೇಜುನಲ್ಲಿ ಒದಗಿಸುವ ಈ ಕೋರ್ಸ್‌ ನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಸಿ.ಎಸ್.ಇ.ಇ.ಟಿ ಬಗ್ಗೆ ಖ್ಯಾತ ಕಂಪೆನಿ ಸೆಕ್ರೆಟರಿ ಸಂತೋಷ್ ಪ್ರಭು ವಿದ್ಯಾರ್ಥಿಗಳಿಗೆ ಕಂಪೆನಿ ಸೆಕ್ರೆಟಿಯ ಕಾರ್ಯವೈಖರಿ ಹಾಗೂ ಅಗತ್ಯತೆಗಳ ಬಗ್ಗೆ ವಿವರಿಸಿದರು. ಸಂಸ್ಥೆಯ ಸಂಸ್ಥಾಪಕರಾದ ಗಣಪತಿ ಭಟ್‌ ಕೆ.ಎಸ್‌ ವಿದ್ಯಾರ್ಥಿಗಳಿಗೆ ಕೋರ್ಸ್‌ ನ ಮಹತ್ವವನ್ನು ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಘವೇಂದ್ರ ಬಿ.ರಾವ್‌, ಜ್ಞಾನೇಶ್‌ ಕೋಟ್ಯಾನ್‌, ಉಮೇಶ್‌, ಚಂದ್ರಕಾಂತ್‌ , ಉಪನ್ಯಾಸಕಿ ಅಕ್ಷತಾ ಮತ್ತಿತರರು ಉಪಸ್ಥಿತರಿದ್ದರು

 

 

 

                        

                          

 

 

 

 

 

                        

                          

 

 

 

 

 

Leave a Reply

Your email address will not be published. Required fields are marked *