ಕಾರ್ಕಳ: ಅತಿವೇಗವಾಗಿ ಬಂದ ಕಾರು ಹಾಗೂ ಸ್ಕೂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಕೂಟರ್ ಸವಾರ ಹಾಗೂ ಸಹಸವಾರ ಗಾಯಗೊಂಡಿದ್ದಾರೆ.
ಕಾರ್ಕಳದ ಜೋಡುರಸ್ತೆ ಜಂಕ್ಷನ್ ನಲ್ಲಿ ಭಾನುವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು,ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಬೈಂದೂರು ತಾಲೂಕಿನ ರಾಗಿಹಕ್ಲು ನಿವಾಸಿ ಮಣಿಕಂಠ(22) ಹಾಗೂ ಶ್ರೀಕಂಠ(20) ಎಂಬವರು ಗಾಯಗೊಂಡಿದ್ದಾರೆ.
ಮಣಿಕಂಠ ಹಾಗೂ ಶ್ರೀಕಂಠ ಇಬ್ಬರು ಬೈಂದೂರಿನಿಂದ ಉಡುಪಿ ಕಾರ್ಕಳ ಮಾರ್ಗವಾಗಿ ಕಳಸಕ್ಕೆ ಹೊರಟು, ಕಾರ್ಕಳದ ಜೋಡುರಸ್ತೆ ಜಂಕ್ಷನ್ ಬಳಿ ಬರುತ್ತಿದ್ದಾಗ ಕಾರು ಚಾಲಕ ತನ್ನ ಕಾರನ್ನು ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮಣಿಕಂಠ ಚಲಾಯಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೂ ಗಾಯಗಳಾಗಿವೆ.
ಜಂಕ್ಷನ್ ನಲ್ಲಿ ವೇಗ ತಗ್ಗಿಸದೇ ಪದೇ ಪದೇ ಇಂತಹ ಅಪಘಾತಗಳು ಸಂಭವಿಸುತ್ತಿವೆ.
ಈ ಘಟನೆ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.