ಹೆಬ್ರಿ : ಹೆಬ್ರಿ ಸಮೀಪದ ಅಲ್ಬಾಡಿ ಬಳಿ ಎರಡು ಕಾರುಗಳ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಹಲವರಿಗೆ ಗಾಯಗಳಾಗಿವೆ.
ಮಂಗಳೂರು ದೇರಲ್‌ಕಟ್ಟೆಯ ಸುನೀಲ್(54) ಕುಂದಾಪುರದ ಆನಗಳ್ಳಿಯಿಂದ ಪತ್ನಿ ಶೈಲಜ ಹಾಗೂ ಸ್ನೇಹಿತ ಮೋಹನ್‌ಕುಮಾರ ಅವರನ್ನು ಎ. 13ರಂದು ಕಾರಿನಲ್ಲಿ ಬೆಂಗಳೂರು ಕಡೆಗೆ ಹೋಗುತ್ತಿದ್ದರು. ಹೆಬ್ರಿ ತಾಲೂಕು ಅಲ್ಬಾಡಿ ಗ್ರಾಮದ 9ನೇ ಮೈಲುಕಲ್ಲು ಬಳಿ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆಯಿತು. ಎರಡು ಕಾರುಗಳು ಜಖಂಗೊಂಡು ಕಾರಿನಲ್ಲಿದ್ದ ಸುನೀಲ್ ಮತ್ತು ಮೋಹನ್‌ಕುಮಾರ್ ಅವರಿಗೆ ಗಾಯಗಳಾಗಿವೆ.
ಢಿಕ್ಕಿ ಹೊಡೆದ ಕಾರಿನ ಚಾಲಕ ಚೌಡ, ಪ್ರಯಾಣಿಕರಾದ ಪ್ರಜ್ವಲ್, ಧೀರಜ್, ಲಕ್ಷ್ಮಮ್ಮ, ಪ್ರೇಮಾ ಸಿರಿ ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.