ಕಾರ್ಕಳ: ಮನೆಮಂದಿ ಊಟ ಮಾಡಿ ಮಲಗಿ ಗಾಢ ನಿದ್ದೆಯಲ್ಲಿರುವಾಗ ಕಳ್ಳರು ಕೈಚಳಕ ತೋರಿದ್ದು, ಕಿಟಕಿಯ ಬಾಗಿಲಿನ ಚಿಲಕ ಮುರಿದು ಒಳನುಗ್ಗಿ ಕೋಣೆಯ ಕಪಾಟಿನಲ್ಲಿರಿಸಿದ್ದ 2.25 ಲಕ್ಷ ನಗದು ದೋಚಿ ಪರಾರಿಯಾದ ಘಟನೆ ಕಾರ್ಕಳದ ಜೋಡುರಸ್ತೆ ಎಂಬಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಜೋಡುರಸ್ತೆಯ ಸಾರಸ್ವತ ನಗರದ ನಿವಾಸಿ ರೈಸ್ ಮಿಲ್ ಮಾಲಕ ಜಗದೀಶ್ ನಾಯಕ್ ಎಂಬವರ ಮನೆಯಲ್ಲಿ ಕಳ್ಳತನವಾಗಿದ್ದು, ಅವರು ಹಾಗೂ ಪತ್ನಿ ಊಟ ಮುಗಿಸಿ ಮಲಗಿದ ನಂತರ ಮುಂಜಾನೆ ವೇಳೆ ಬಾಗಿಲು ತೆರೆದ ಸದ್ದು ಕೇಳಿ ಜಗದೀಶ್ ಅವರು ಹೊರಗಡೆ ಬಂದಾಗ ಮುಖ್ಯ ದ್ವಾರವು ತೆರದ ಸ್ಥಿತಿಯಲ್ಲಿತ್ತು, ಇದಾದ ಕಪಾಟು ಪರಿಶೀಲಿಸಿದಾಗ ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿದ್ದು ಕಪಾಟಿನಲ್ಲಿಟ್ಟಿದ್ದ 2.25 ಲಕ್ಷ ನಗದು ದೋಚಿ ಪರಾರಿಯಾಗಿದ್ದಾರೆ
ಈ ಕುರಿತು ಜಗದೀಶ್ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ