Category: ಅಪಘಾತ

ಕಾಡುಹೊಳೆ: ಕಾರುಗಳು ಮಖಾಮುಖಿ ಢಿಕ್ಕಿ- ಪ್ರಕರಣ ದಾಖಲು

ಅಜೆಕಾರು: ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮರ್ಣೆ ಗ್ರಾಮದ ಕಾಡುಹೊಳೆ ಎಂಬಲ್ಲಿ ಕಾರುಗಳೆರಡು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಓರ್ವ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗುರುವಾರ ಸಂಜೆ ಓಮಿನಿ ಕಾರು ಭದ್ರಾವತಿಯಿಂದ ಕಾರ್ಕಳ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿದ್ದಾಗ ಮರ್ಣೆ ಗ್ರಾಮದ ನಂದಾರು ಎಂಬಲ್ಲಿ…

ಮಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಏರಿದ ಕಾರು:ಚಾಲಕ ಪ್ರಾಣಾಪಾಯದಿಂದ ಪಾರು

ಮಂಗಳೂರು : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಮೇಲೆ ಹೋಗಿ ನಿಂತ ಘಟನೆ ಮಂಗಳೂರು ನಗರದ ಪಡೀಲ್ ಬಳಿಯ ಅಳಪೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ನಡೆದಿದೆ. ಪಡೀಲ್ ಕಡೆಯಿಂದ ನಂತೂರಿನ ಕಡೆಗೆ ಸಾಗುತ್ತಿದ್ದ ಕಾರು, ಅಳಪೆಯ ಕಡಿದಾದ…

ಮಂಗಳೂರು: ಕೆಪಿಟಿ ಬಳಿ ಡಿವೈಡರ್‌ ಗೆ ಡಿಕ್ಕಿ ಹೊಡೆದ ಬೈಕ್ : ಕೇರಳ ಮೂಲದ ಇಬ್ಬರು ವಿದ್ಯಾರ್ಥಿಗಳು ಮೃತ್ಯು

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಬಳಿ ಮಂಗಳವಾರ ಮುಂಜಾನೆ 2.50ರ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಗಾಯಗೊಂಡು, ಕೇರಳ ಮೂಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಡೆದಿದೆ. ಕೇರಳದ ಕಾಸರಗೋಡು ಜಿಲ್ಲೆ ಚೆರ್ವತ್ತೂರು ಕೈಯ್ಯೂರು ನಿವಾಸಿ ಧನುರ್ವೇದ್‌ (19)…

ಅಜೆಕಾರು: ಬೈಕಿಗೆ ಟೆಂಪೊ ಢಿಕ್ಕಿಯಾಗಿ ಇಬ್ಬರಿಗೆ ಗಾಯ

ಅಜೆಕಾರು: ಹಿಂದಿನಿಂದ ಬಂದ ಟೆಂಪೊ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಹಾಗೂ ಟೆಂಪೊ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಯಪ್ರಕಾಶ್ ಎಂಬವರು ಸೋಮವಾರ (ಎ.7) ಶಿರ್ಲಾಲು ಹೆಗ್ಡೆ ಬೆಟ್ಟು ಕ್ರಾಸ್ ಬಳಿ ತಮ್ಮ ಬೈಕಿನಲ್ಲಿ ಹೋಗುತ್ತಿದ್ದಾಗ ಶಿರ್ಲಾಲು ಪೇಟೆಯಿಂದ…

ಉಡುಪಿ : ಹಿರಿಯ ಬಸ್ ಏಜೆoಟ್ ಬಾವಿಗೆ ಹಾರಿ ಆತ್ಮಹತ್ಯೆ

ಉಡುಪಿ: ಪಕ್ಕದ ಮನೆಯ ಬಾವಿಗೆ ಹಾರಿ ವೃದ್ಧನೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಬನ್ನಂಜೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು‌ ಮಂಜುನಾಥ್ ಶೆಣೈ (72) ಎಂದು ಗುರುತಿಸಲಾಗಿದೆ. ಇವರು ಹಿರಿಯ ಬಸ್ ಏಜೆಂಟ್ ಆಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಉಡುಪಿ ನಗರ…

ಗಂಗೊಳ್ಳಿ: ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ: ಓರ್ವ ಸಾವು, ಇನ್ನೋರ್ವ ಗಂಭೀರ

ಕುಂದಾಪುರ: ಬೈಕೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ ಇನ್ನೊರ್ವ ಗಂಭೀರ ಗಾಯ ಗೊಂಡ ಘಟನೆ ತ್ರಾಸಿ – ಗಂಗೊಳ್ಳಿ ಸಂಪರ್ಕಿಸುವ ಗುಜ್ಜಾಡಿ ಗ್ರಾಮದ ಕೊಡಪಾಡಿ ಶ್ರೀ ಮಾರಿಕಾಂಬೆ ದೇವಸ್ಥಾನ ಮುಖ್ಯರಸ್ತೆಯಲ್ಲಿ ನಡೆದಿದೆ. ಬೈಕ್…

ಮಾಳ ಎಸ್‌ಕೆ ಬಾರ್ಡರ್‌ನಲ್ಲಿ ಲಾರಿ ಪಲ್ಟಿಯಾಗಿ 11 ಮಂದಿಗೆ ಗಾಯ

ಕಾರ್ಕಳ: ತಾಲೂಕಿನ ಮಾಳ ಎಸ್‌ಕೆ ಬಾರ್ಡರ್ ಬಳಿ ಇಂದು ಮುಂಜಾನೆ ಲಾರಿಯೊಂದು ಪಲ್ಟಿಯಾಗಿದ್ದು ಲಾರಿಯಲ್ಲಿದ್ದ 11 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ತೆಲಂಗಾಣದಿಂದ ಮಂಗಳೂರಿಗೆ ಪ್ಲಾಸ್ಟಿಕ್ ಐಟಂಗಳನ್ನು ಸಾಗಿಸುತ್ತಿದ್ದ ಲಾರಿ ಇಂದು (ಎ.7) ಮುಂಜಾನೆ ಎಸ್‌ಕೆ ಬಾರ್ಡರ್ ಬಳಿ ಚಾಲಕನ ನಿಯಂತ್ರಣ ತಪ್ಪಿ…

ಕಾಳಾವರ :ಕೃಷಿ ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿ ನಂದಿಸಲು ಹೋದ ರೈತ ಬೆಂಕಿ ತಗುಲಿ ಸಜೀವ ದಹನ

ಕುಂದಾಪುರ : ಸುಡುಮಣ್ಣಿಗೆ ಹಾಕಿದ್ದ ಬೆಂಕಿ ಬಯಲಿನ ಒಣಹುಲ್ಲಿಗೆ ಹೊತ್ತಿಕೊಂಡ ಕಾರಣದಿಂದ ಕೃಷಿಕರೊಬ್ಬರು ಬೆಂಕಿ ನಂದಿಸಲು ಹೋಗಿ ಹೊಗೆ ಆವರಿಸಿ ಉಸಿರುಗಟ್ಟಿ ಬೆಂಕಿಯಲ್ಲಿ ಸುಟ್ಟು ಕರಕಲಾದ ಘಟನೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ಶಾಂತಾವರ ಎಂಬಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ ಕಾಳಾವರ…

ಬ್ರಹ್ಮಾವರದ ಪೇತ್ರಿ ಜಂಕ್ಷನ್ ನಲ್ಲಿ  ಟಿಪ್ಪರ್ ಹಾಗೂ ಸ್ಕೂಟರ್ ಡಿಕ್ಕಿ: ಭೀಕರ ರಸ್ತೆ ಅಪಘಾತದಲ್ಲಿ ಒರ್ವ ಸಾವು,ಸಹಸವಾರ ಗಂಭೀರ

ಬ್ರಹ್ಮಾವರ: ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ ಇನ್ನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಏ. 4 ರಂದು ಶುಕ್ರವಾರ ಸಂಜೆ ಬ್ರಹ್ಮಾವರ ತಾಲೂಕಿನ ಪೇತ್ರಿ ಜಂಕ್ಷನ್ ಬಳಿ ಸಂಭವಿಸಿದೆ. ಮೃತ ಯುವಕರನ್ನು…

ಉಪ್ಪಿನಂಗಡಿ : ಬಸ್‌ ಪಲ್ಟಿ : ಓರ್ವ ಸಾವು, 12 ಮಂದಿಗೆ ಗಾಯ

ಉಪ್ಪಿನಂಗಡಿ : ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದು ಉಪ್ಪಿನಂಗಡಿ ಸಮೀಪ, ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿ, ಓರ್ವ ಪ್ರಯಾಣಿಕ ಮೃತಪಟ್ಟು 12 ಮಂದಿ ಗಾಯಗೊಂಡಿರುವ ಘಟನೆ ಏಪ್ರಿಲ್ 4 ರಂದು ಬೆಳಿಗ್ಗೆ 5 ಗಂಟೆಗೆ ನಡೆದಿದೆ.…