Category: ಅಪಘಾತ

ಸಾಣೂರು: ಸ್ಕೂಟರ್ ಪಲ್ಟಿಯಾಗಿ ಸವಾರ ಸ್ಥಳದಲ್ಲೇ ಸಾವು

ಕಾರ್ಕಳ: ಸ್ಕೂಟರ್ ಪಲ್ಟಿಯಾದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಮುದ್ದಣನಗರದ ಬೆರ್ಕೆದಗುರಿ ಎಂಬಲ್ಲಿ ಸಂಭವಿಸಿದೆ. ಮುದ್ದಣನಗರದ ಶ್ರೀರಾಮನಗರ ನಿವಾಸಿ ಹರೀಶ (46)ಎಂಬುವವರು ಮೃತಪಟ್ಟ ಸ್ಕೂಟರ್ ಸವಾರ. ಹರೀಶ್ ಬುಧವಾರ ಸಂಜೆ ಮುದ್ದಣನಗರ…

ಕಣಜಾರು: ಚಲಿಸುತ್ತಿದ್ದ ಬೈಕಿಗೆ ನಾಯಿ ಅಡ್ಡಬಂದು ಸವಾರ ಸ್ಥಳದಲ್ಲೇ ಸಾವು

ಕಾರ್ಕಳ:ಚಲಿಸುತ್ತಿದ್ದ ಬೈಕಿಗೆ ಏಕಾಎಕಿ ನಾಯಿ ಅಡ್ಡಬಂದ ಪರಿಣಾಮ ಬೈಕ್ ಅಪಘಾತವಾಗಿ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಾರ್ಕಳ ತಾಲೂಕಿನ ಕಣಜಾರಿನಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಬೈಕ್ ಸವಾರ ಕಣಜಾರಿನ ಮಂಜುನಾಥ (41) ಮೃತಪಟ್ಟ ದುರ್ದೈವಿ. ಕಣಜಾರು ಗುಡ್ಡೆಯಂಗಡಿ ಎಂಬಲ್ಲಿ ಈ…

ಆನೆಕೆರೆ ಬಳಿ ರಿಕ್ಷಾ ಪಲ್ಟಿಯಾಗಿ ಚಾಲಕನಿಗೆ ಗಂಭೀರ ಗಾಯ

ಕಾರ್ಕಳ: ಚಾಲಕನ ನಿಯಂತ್ರಣತಪ್ಪಿ ರಿಕ್ಷಾ ಆವರಣ ಗೋಡೆಗೆ ಬಡಿದ ಪರಿಣಾಮ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ಕಾರ್ಕಳದ ಆನೆಕೆರೆ ಬಳಿ ನಡೆದಿದೆ. ಕುಕ್ಕುಂದೂರು ಗ್ರಾಮದ ನಕ್ರೆಯ ನಿವಾಸಿ ಹರೀಶ್ ಕುಮಾರ್ ಎಂಬವರು ಗಾಯಗೊಂಡಿದ್ದು, ಅವರು ಆನೆಕೆರೆ ಕಡೆಯಿಂದ…

ಉಡುಪಿ: ಜನೌಷಧಿ ಕೇಂದ್ರಕ್ಕೆ ನುಗ್ಗಿದ ಆ್ಯಂಬುಲೆನ್ಸ್

ಉಡುಪಿ:ಚಾಲಕನ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ಜನೌಷಧಿ ಕೇಂದ್ರದ ಒಳಗೆ ನುಗ್ಗಿರುವ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಆಂಬುಲೆನ್ಸ್ ವಾಹನ ಚಾಲಕನ ನಿಯಂತ್ರಣತಪ್ಪಿದ ಉಡುಪಿ ತಾಲೂಕಿನ ಲಕ್ಷ್ಮೀಂದ್ರ ನಗರದ ಜನೌಷಧಿ ಕೇಂದ್ರದ ಒಳಗೆ ನುಗ್ಗಿದೆ. ನಸುಕಿನ ಜಾವದಲ್ಲಿ ಈ ಘಟನೆ…

ಹೆಬ್ರಿ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಕಾರು ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು

ಹೆಬ್ರಿ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ವೇಗವಾಗಿ ಬಂದ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಹೆಬ್ರಿ ತಾಲೂಕಿನ ಕನ್ಯಾನ ಶಾಲೆಯ ಬಳಿ ಡಿ.31 ರ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ…

ಕಾರ್ಕಳ: ಪ್ರತ್ಯೇಕ ಅಪಘಾತ ಪ್ರಕರಣ: ಬೈಕ್ ಸವಾರರಿಗೆ ಗಾಯ

ಹಿರ್ಗಾನ: ಬೈಕುಗಳೆರಡು ಡಿಕ್ಕಿ: ಸವಾರನಿಗೆ ಗಾಯ ಕಾರ್ಕಳ: ಎದುರುಗಡೆಯಿಂದ ಬೈಕಿನಲ್ಲಿ ಹೋಗುತ್ತಿದ್ದ ಸವಾರನೋರ್ವ ಯಾವುದೇ ಮುನ್ಚೂಚನೇ ನೀಡದೇ ಹಠಾತ್ತಾಗಿ ಬೈಕನ್ನು ಆತನ ಬಲಬದಿಗೆ ತಿರುಗಿಸಿದಾಗ ಹಿಂದಿನಿAದ ಬರುತ್ತಿದ್ದ ಬೈಕ್ ಡಿಕ್ಕಿಯಾಗಿ ಸವಾರ ಬಿದ್ದು ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ…

ಶಿಕ್ಷಣ ಸಚಿವ ಮಧು ಬಂಗಾರಪ್ಪರ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

ತುಮಕೂರು:ತಾಲೂಕಿನ ನಂದಿಹಳ್ಳಿ ಬಳಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಮಧು ಬಂಗಾರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ತಡರಾತ್ರಿ 12 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು,ಸಚಿವರ ಕಾರಿಗೆ ರಾಜಸ್ಥಾನ ನೋಂದಣಿಯ ಲಾರಿ…

ಹೈದರಾಬಾದ್ ಅಂಕುರಾ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅನಾಹುತ: ಬೆಂಕಿಯ ಜ್ವಾಲೆಗೆ ಹೊತ್ತಿ ಉರಿದ ಕಟ್ಟಡ

ಹೈದರಾಬಾದ್ : ಹೈದರಾಬಾದ್ ಅಂಕುರಾ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಬೆಂಕಿ ಕಟ್ಟಡಕ್ಕೆ ಹಬ್ಬುತ್ತಿದ್ದಂತೆಯೇ ಆಸ್ಪತ್ರೆಯ ಆಡಳಿತ ಮಂಡಳಿಯು ತಕ್ಷಣವೇ ರೋಗಿಗಳನ್ನು ಆಸ್ಪತ್ರೆಯಿಂದ ಶಿಫ್ಟ್ ಮಾಡಿದೆ‌ ಆಸ್ಪತ್ರೆಯ ಮೇಲಿನ ಮಹಡಿಯಲ್ಲಿ ಈ…

ಹೆಬ್ರಿ:ಮಹೀಂದ್ರಾ ಪಿಕಪ್- ಕಾರು ಡಿಕ್ಕಿ: ಹಲವರಿಗೆ ಗಾಯ

ಹೆಬ್ರಿ: ಪಿಕಪ್ ವಾಹನ ಹಾಗೂ ಕಾರಿನ‌ ನಡುವೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಾಯಗಳಾದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ ಹೆಬ್ರಿ ಪೇಟೆಯ ಕುಚ್ಚೂರು ಜಂಕ್ಷನ್ ನಲ್ಲಿ ಈ ಅಪಘಾತ ಸಂಭವಿಸಿದ್ದು,ಶುಕ್ರವಾರ ಮುಂಜಾನೆ 3.45ರ ವೇಳೆಗೆ ಸೋಮೇಶ್ವರದಿಂದ ಉಡುಪಿ ಕಡೆಗೆ…

ಕೋಟೇಶ್ವರ: ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ಓರ್ವ ಸಾವು, ನಾಲ್ವರಿಗೆ ಗಾಯ

ಉಡುಪಿ:ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡ ಘಟನೆ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ‌66ರಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಮೃತರನ್ನು ಉದ್ಯಾವರ ಸಂಪಿಗೆನಗರದ ನಿವಾಸಿ ರೊಬರ್ಟ್ ಕ್ಯಾಸ್ಟಲಿನೋ ಅವರ ಪುತ್ರ,…