Category: ಅಪರಾಧ

ಹೆಬ್ರಿ: ರಸ್ತೆ ಬದಿ ಮಲಗಿದ್ದ ಜಾನುವಾರು ಕಳವು- ಓರ್ವ ಆರೋಪಿ ಪೊಲೀಸ್ ವಶಕ್ಕೆ, ಇಬ್ಬರು ಪರಾರಿ

ಹೆಬ್ರಿ: ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುತ್ತಿದ್ದ ವೇಳೆ ಬೆನ್ನತ್ತಿದ್ದ ಪೊಲೀಸರ ತಂಡ ಓರ್ವ ಆರೋಪಿ ಹಾಗೂ ಜಾನುವಾರು ಸಾಗಾಟಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಗೂಡ್ಸ್ ವಾಹನದಲ್ಲಿದ್ದ ಜಾನುವಾರು ಮೃತಪಟ್ಟಿದೆ…

ಬೈಂದೂರಿನ ಮಹಿಳೆಯ ವಾಟ್ಸಾಪ್ ಹ್ಯಾಕ್ ಮಾಡಿ ಬ್ಯಾಂಕಿಂಗ್ ವಂಚನೆಗೆ ಯತ್ನ! ಪತ್ರಕರ್ತ ಸೇರಿ ಹಲವರಿಗೆ ರಾಷ್ಟ್ರೀಕೃತ ಬ್ಯಾಂಕಿನ ನಕಲಿ ಲಿಂಕ್ ರವಾನೆ

ಕಾರ್ಕಳ: ಬ್ಯಾಂಕಿನ ಹಣ ಎಗರಿಸಲು ವಂಚಕರು ನಾನಾ ತಂತ್ರಗಳನ್ನು ಕಂಡುಕೊಳ್ಳುತ್ತಿದ್ದು,ವಂಚಕರ ಮೋಸದ ಜಾಲಕ್ಕೆ ಸಿಲುಕಿ ಸಾಕಷ್ಟು ಜನ ಹಣ ಕಳೆದುಕೊಂಡವರಿದ್ದಾರೆ. ನಾವು ಬ್ಯಾಂಕಿನವರು ಎಂದು ಕರೆ ಮಾಡಿ ವೈಯಕ್ತಿಕ ದಾಖಲೆಗಳನ್ನು ಖಚಿತಪಡಿಸಿ ಕೊನೆಗೆ ಪಿನ್ ನಂಬರ್ ಪಡೆದು ಹಣ ದೋಚಿದ ಸಾಕಷ್ಟು…

ವಾಟ್ಸಾಪ್ ಗಳಿಗೆ ಬರುತ್ತಿದೆ ನಕಲಿ ಲಿಂಕ್: ನಿಮ್ಮ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಆನ್ ಲೈನ್ ಖದೀಮರಿದ್ದಾರೆ ಎಚ್ಚರ

ಕರಾವಳಿ ನ್ಯೂಸ್ ಡೆಸ್ಕ್ ಇಂದಿನ ದಿನಗಳಲ್ಲಿ ಜಗತ್ತು ತಂತ್ರಜ್ಞಾನಕ್ಕೆ ಎಷ್ಟು ಅವಲಂಬಿತವಾಗಿದೆ ಎಂದರೆ ನಮ್ಮ ಬ್ಯಾಂಕ್ ಖಾತೆಗಳಲ್ಲಿ ಲಕ್ಷಗಟ್ಟಲೆ ಹಣವಿದ್ದರೂ ಸರ್ವರ್ ಡೌನ್ ಇದ್ದಾಗ ನಮಗೆ ತುರ್ತು ಸಂದರ್ಭದಲ್ಲಿ‌ ಕೂಡ ಹಣ ಸಿಗಲಾರದ ಪರಿಸ್ಥಿತಿ ಇದೆ. ಯಾಕೆಂದರೆ ಇಂದು ಇಂಟರ್’ನೆಟ್ ಇಲ್ಲದೇ…

ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ: ಆರೋಪಿ ಅರುಣ್ ಚೌಗುಲೆಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಉಡುಪಿ: ಉಡುಪಿ ತಾಲೂಕಿನ ನೇಜಾರು ಸಮೀಪದ ತೃಪ್ತಿನಗರದಲ್ಲಿ 2023 ನವೆಂಬರ್ 12 ರಂದು ಗಗನಸಖಿ ಸೇರಿ ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ದಾರುಣ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿ ಪ್ರವೀಣ್ ಅರುಣ್ ಚೌಗುಲೆಗೆ ಜಾಮೀನು…

ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭ  ಹಿನ್ನೆಲೆ: ಅಭಿಯಾನ ನಡೆಸುತ್ತಿರುವ ಶ್ರೀರಾಮಸೇನೆ ಕಾರ್ಯಕರ್ತರಿಗೆ ಕೊಲೆ ಬೆದರಿಕೆ!

ಧಾರವಾಡ: ರಾಜ್ಯದಲ್ಲಿ ಶ್ರೀರಾಮಸೇನೆಯಿಂದ ಲವ್ ಜಿಹಾದ್ ತಡೆಗೆ ಅಭಿಯಾನ ಆರಂಭಿಸಲಾಗಿದೆ. ಇದರ ಸಲುವಾಗಿ ಶ್ರೀರಾಮಸೇನೆಯಿಂದ ಸಹಾಯವಾಣಿ ಕೂಡ ಆರಂಭಿಸಲಾಗಿದ್ದು, ಲವ್ ಜಿಹಾದ್ ವಿರುದ್ದ ಅಭಿಯಾನ ಆರಂಭಿಸಿದ ಶ್ರೀರಾಮಸೇನೆ ಮೇಲೆ ಬಾಂಬ್ ಹಾಕುವ ಹಾಗೂ ಜೀವ ತೆಗೆಯುವ ಬೆದರಿಕೆಗಳು ಕೇಳಿಬರುತ್ತಿವೆ. ಶ್ರೀರಾಮಸೇನೆ ಹೆಲ್ಪ್…

ಕೌಡೂರು : ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

ಕಾರ್ಕಳ: ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಕಾಡಿಬೈಲು ಎಂಬಲ್ಲಿ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಡಿಬೈಲು ನಿವಾಸಿ ರತ್ನ (85) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅವರು ತಮ್ಮ ಮಗ ಸೊಸೆ ಮೊಮ್ಮಕ್ಕಳೊಂದಿಗೆ ಕಾಡಿಬೈಲು ನಲ್ಲಿ ವಾಸವಿದ್ದರು. ಜು.5 ರಂದು ರತ್ನ…

ಹೆಬ್ರಿ ಸಮೀಪದ ಶಿವಪುರದಲ್ಲಿ ಭೀಕರ ಅಪಘಾತ: ಜೆಸಿಬಿಗೆ ಬೈಕ್ ಡಿಕ್ಕಿಯಾಗಿ ಯುವಕ ಸ್ಥಳದಲ್ಲೇ ಸಾವು ಸಹೋದರನನ್ನು ಶಾಲೆಗೆ ಡ್ರಾಪ್ ಕೊಡಲು ಹೋಗುತ್ತಿದ್ದ ನಡೆಯಿತು ದುರಂತ

ಹೆಬ್ರಿ: ಜೆಸಿಬಿ ವಾಹನಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಶಿವಪುರದಲ್ಲಿ ಸಂಭವಿಸಿದೆ. ಶಿವಪುರ ನಾಯರ್ ಕೋಡು ನಿವಾಸಿ ಪ್ರತ್ಯಕ್ಷ ಶೆಟ್ಟಿ (21 ) ಎಂಬವರು ಮೃತ ಪಟ್ಟ ಯುವಕ. ಶುಕ್ರವಾರ ಬೆಳಗ್ಗೆ ಈ…

ಅಜೆಕಾರು:ರಿಕ್ಷಾ-ಬೊಲೆರೊ ಡಿಕ್ಕಿ: ರಿಕ್ಷಾ ಚಾಲಕ ಸೇರಿ ಕಾರ್ಮಿಕ ಮಹಿಳೆಯರಿಗೆ ಗಾಯ

ಅಜೆಕಾರು : ರಿಕ್ಷಾ ಹಾಗೂ ಬೊಲೆರೊ ಡಿಕ್ಕಿಯಾಗಿ ರಿಕ್ಷಾ ಚಾಲಕ ಸೇರಿದಂತೆ ಐವರು ಗಾಯಗೊಂಡಿರುವ ಘಟನೆ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಅಜೆಕಾರು ಕೈಕಂಬದ ಮಧುರಾಪಟ್ಟಣ ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಅಜೆಕಾರು ಸಮೀಪದ ಅಂಡಾರು ಗ್ರಾಮದ ಹರೀಶ್ ರಾವ್ ಎಂಬವರು…

ಹೆಬ್ರಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಲದ ಕಂತು ಕಟ್ಟಿಲ್ಲವೆಂದು ಕುಟುಂಬಕ್ಕೆ ಜೀವ ಬೆದರಿಕೆ

ಹೆಬ್ರಿ: ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ ಸದಸ್ಯರೊಬ್ಬರು ಸಾಲದ ಕಂತು ಕಟ್ಟಿಲ್ಲವೆಂದು ಅವರನ್ನು ಯೋಜನೆಯ ಕಚೇರಿಯಲ್ಲಿ ಕೂಡಿ ಹಾಕಿ ಅನ್ನ ನೀರು ಕೊಡದೇ ಸಾಲ ಮರು ಪಾವತಿ ಮಾಡದಿದ್ದರೆ ಮನೆಯ ಸಾಮಾಗ್ರಿಗಳನ್ನು ವಶಪಡಿಸಿ ಮನೆಗೆ ಬೆಂಕಿ ಹಾಕುವುದಾಗಿ ಬೆದರಿಕೆಯೊಡ್ಡಿದ ಕುರಿತು…

ಮಂಗಳೂರಲ್ಲಿ ನಡೆಯಿತು ಘೋರ ದುರಂತ:ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿತ: ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು!

ಮಂಗಳೂರು :ಮಂಗಳೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಮಣ್ಣು ಕುಸಿದು ಮಣ್ಣಿನ ಅಡಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿರುವ ಘಟನೆ ಮಂಗಳೂರಿನ ಬಲ್ಮಠದಲ್ಲಿ ನಡೆದಿದೆ. ಮಂಗಳೂರಿನ ನಗರದ ಬಲ್ಮಠದಲ್ಲಿನ ಖಾಸಗಿ ಕಟ್ಟಡ ನಿರ್ಮಾಣದ…