Category: ಅಪರಾಧ

ಬೈಲೂರು: ಶಾಲೆಯ ಬಿಸಿಯೂಟದಲ್ಲಿ ಕಲ್ಲು ಸಿಕ್ಕಿದ ಹಿನ್ನಲೆಯಲ್ಲಿ ಅಡುಗೆ ಸಹಾಯಕಿಗೆ ನಿಂದನೆ

ಕಾರ್ಕಳ: ಶಾಲೆಯ ಬಿಸಿಯೂಟದಲ್ಲಿ ಕಲ್ಲು ಸಿಕ್ಕಿದ ಕಾರಣಕ್ಕೆ ಅಕ್ಷರ ದಾಸೋಹ ಅಧಿಕಾರಿ ಹಾಗೂ ಮುಖ್ಯ ಶಿಕ್ಷಕಿ ಅಡುಗೆ ಸಹಾಯಕಿಗೆ ನಿಂದಿಸಿರುವ ಪ್ರಕರಣ ಕಾರ್ಕಳ ತಾಲೂಕಿನ ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಮೈನ್ ಶಾಲೆಯಲ್ಲಿ ನಡೆದಿದೆ. ಕೌಡೂರು ಗ್ರಾಮದ ರಾಜೀವಿ (59) ಎಂಬವರು…

ಹೆಬ್ರಿ : ಸಾರ್ವಜನಿಕ ಪ್ರದೇಶದಲ್ಲಿ ಬೆಂಕಿ ಹಾಕುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರಿಗೇ ಜೀವ ಬೆದರಿಕೆಯೊಡ್ಡಿದ ಭೂಪ!

ಹೆಬ್ರಿ: ಸಾರ್ವಜನಿಕರ ಆಸ್ತಿಪಾಸ್ತಿ,ಪ್ರಾಣ ರಕ್ಷಣೆಯಂತಹ ತುರ್ತು ಸಂದರ್ಭಗಳಲ್ಲಿ ದಿನದ 24 ಗಂಟೆಯೂ ಕಾರ್ಯಪ್ರವೃತ್ತರಾಗಿರುವ ಪೊಲೀಸರ ವಿರುದ್ದವೇ ತಿರುಗಿದ್ದ ಬಿದ್ದ ಆಸಾಮಿಯೋರ್ವ ಕರ್ತವ್ಯನಿರತರಾಗಿರುವ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ಜೀವಬೆದರಿಕೆಯೊಡ್ಡಿದ ಘಟನೆ ಹೆಬ್ರಿ ತಾಲೂಕಿನ ಬೇಳಂಜೆ ಎಂಬಲ್ಲಿ ನಡೆದಿದೆ. ಬೇಳಂಜೆ…

ಮುದ್ರಾಡಿ: ಬೈಕ್ ಡಿಕ್ಕಿಯಾಗಿ ಪಾದಾಚಾರಿ ವ್ಯಕ್ತಿ ಗಂಭೀರ

ಹೆಬ್ರಿ : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಹಿಂದಿನಿAದ ವೇಗವಾಗಿ ಬಂದ ಬೈಕ್ ಡಿಕ್ಕಿಯಾಗಿ ಪಾದಾಚಾರಿ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಮುದ್ರಾಡಿ ಗ್ರಾಮದ ಅಣ್ಣಯ್ಯ ನಾಯ್ಕ (54) ಗಾಯಗೊಂಡವರು. ಅವರು ಶನಿವಾರ ಬೆಳಗ್ಗೆ ಉಪ್ಪಳ ಕಡೆಯಿಂದ ಮುದ್ರಾಡಿ ಪೇಟೆಗೆ ನಡೆದುಕೊಂಡು…

ನಲ್ಲೂರು: ಪತ್ನಿಯಿಂದ ಪತಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಮಾರಣಾಂತಿಕ ಹಲ್ಲೆಗೈದು ಕೊಲೆ ಬೆದರಿಕೆ

ಕಾರ್ಕಳ:ಪತಿ ತನ್ನ ಮನೆಗೆ ಬರುವುದನ್ನು ಆಕ್ಷೇಪಿಸಿ ಪತ್ನಿಯೇ ಆತನಿಗೆ ಅವಾಚ್ಯ ಪದಗಳಿಂದ ನಿಂದಿಸಿ ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ನಡಾಯಿಪಲ್ಕೆ ಎಂಬಲ್ಲಿ ಶನಿವಾರ ನಡೆದಿದೆ. ಸುರೇಶ ಪೂಜಾರಿ ಶನಿವಾರ ಬೆಳಗ್ಗೆ 9 ಗಂಟೆ…

ಕಾರ್ಕಳ: ಶೇರು ವ್ಯವಹಾರದ ನೆಪದಲ್ಲಿ ವ್ಯಕ್ತಿಯ ಖಾತೆಯಿಂದ 5 ಲಕ್ಷ ಮಿಕ್ಕಿ ಹಣ ಲಪಟಾಯಿಸಿದ ಸೈಬರ್ ವಂಚಕರು!

ಕಾರ್ಕಳ: ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದೆನ್ನುವ ಆಸೆ ಹುಟ್ಟಿಸಿದ ಸೈಬರ್ ವಂಚಕರು ನಕಲಿ ಡಿಮ್ಯಾಟ್ ಖಾತೆ ಸೃಷ್ಟಿಸಿ ಕಾರ್ಕಳದ ವ್ಯಕ್ತಿಯೋರ್ವರಿಗೆ 5 ಲಕ್ಷಕ್ಕೂ ಮಿಕ್ಕಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಬೀರಾಲುಪೇಟೆ…

ಕಾರ್ಕಳ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ನೇಣಿಗೆ ಶರಣು

ಕಾರ್ಕಳ: ಕುಡಿತದ ಚಟದಿಂದ ಬೇಸತ್ತ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣಾದ ಘಟನೆ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಶುಕ್ರವಾರ ನಡೆದಿದೆ. ಕುಂಟಲ್ಪಾಡಿ ನಿವಾಸಿ ಸುಹೇಲ್ (34) ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಶುಕ್ರವಾರ ರಾತ್ರಿ ಮನೆಮಂದಿ ಮಲಗಿದ ಬಳಿಕ ಸುಹೇಲ್ ತನ್ನ…

ಗಂಡ ಹಾಗೂ ಆತನ ಸಂಬAಧಿಕರಿAದ ವರದಕ್ಷಿಣೆ ಕಿರುಕುಳ: ಪತ್ನಿಯಿಂದ ದೂರು

ಹೆಬ್ರಿ: ತನ್ನ ಗಂಡ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ಪೀಡಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುದ್ರಾಡಿ ಗ್ರಾಮದ ಶೃತಿ ಎಂಬವರಿಗೆ ಕಳೆದ 2020ರ ಡಿ.7ರಂದು ಸಂದೇಶ ಎಂಬವರ…

ಹೆಬ್ರಿ: ಬೈಕ್ ಸ್ಕಿಡ್ಡಾಗಿ ಸವಾರ ಗಂಭೀರ

ಹೆಬ್ರಿ: ಬೈಕ್ ಸ್ಕಿಡ್ಡಾದ ಪರಿಣಾಮ ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಹೆಬ್ರಿ ತಾಲೂಕಿನ ಇಂದಿರಾ ನಗರದ ಬಳಿ ಬುಧವಾರ ಸಂಜೆ ಸಂಭವಿಸಿದೆ. ಬೈಕ್ ಸವಾರ ಉಮೇಶ ಎಂಬವರು ಹೆಬ್ರಿ ಕಡೆಯಿಂದ ಕುಚ್ಚೂರು ಕಡೆಗೆ ತನ್ನ ಬೈಕಿನಲ್ಲಿ ಅತೀವೇಗವಾಗಿ ಹೋಗುತ್ತಿದ್ದಾಗ ಇಂದಿರಾನಗರ ಎಂಬಲ್ಲಿ…

ಹಿರಿಯಡಕ: ಅಂಗನವಾಡಿ ಆಹಾರ ಉತ್ಪಾದನಾ ಘಟಕದ ವ್ಯವಹಾರದಲ್ಲಿ ಕೋಟ್ಯಾಂತರ ರೂಪಾಯಿ ಗೋಲ್ ಮಾಲ್: ಸಂಘದ ವ್ಯವಸ್ಥಾಪಕಿಯಿಂದ ಕೋಟ್ಯಾಂತರ ರೂ ವಂಚನೆ ಆರೋಪ!

ಉಡುಪಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಮಹಿಳಾ ಸಹಕಾರಿ ಸಂಸ್ಥೆಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರವಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಇದೇ ಸಂಸ್ಥೆಯ ವ್ಯವಸ್ಥಾಪಕಿಯ ವಿರುದ್ಧ ಅವ್ಯವಹಾರದ ಆರೋಪ ಕೇಳಿಬಂದಿದೆ. ಉಡುಪಿ ಜಿಲ್ಲೆಯ…

ಕರಿಮಣಿ ಮಾಲೀಕ ನೀನಲ್ಲ ಎಂದು ರೀಲ್ಸ್ ಮಾಡಿದ ಪತ್ನಿ;ಪತ್ನಿ ರೀಲ್ಸ್ ಗೆ ಗ್ರಾಮಸ್ಥರ ಕುಹಕ: ಮನನೊಂದು ಪತಿ ಆತ್ಮಹತ್ಯೆಗೆ ಶರಣು!

ಚಾಮರಾಜನಗರ: ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿರುವ ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯದ ‘ಉಪೇಂದ್ರ’ ಚಿತ್ರದ ಓ ನಲ್ಲ.. ನೀನಲ್ಲ, ಕರಿಮಣಿ ಮಾಲೀಕ ನೀನಲ್ಲ ಹಾಡಿನ ರೀಲ್ಸ್ ಮಾಡಿದ್ದು, ಪತ್ನಿಯ ಇನ್‌ಸ್ಟಾಗ್ರಾಮ್ ರೀಲ್ ನಿಂದ ಬೇಸರಗೊಂಡು 34 ವರ್ಷದ ಪತಿ…