Category: ಅಪರಾಧ

ನಕ್ಸಲ್ ಮುಖಂಡೆ ಶ್ರೀಮತಿಯ ಎರಡು ದಿನಗಳ ಪೊಲೀಸ್ ಕಸ್ಟಡಿ ಅಂತ್ಯ: ನ್ಯಾಯಾಂಗ ಬಂಧನ ವಿಸ್ತರಿಸಿ ನ್ಯಾಯಾಲಯ ಆದೇಶ

ಕಾರ್ಕಳ: ಈದು ಗ್ರಾಮದ ಗುಂಡಿ ಸದಾಶಿವ ಗೌಡನ ಹತ್ಯೆಯ ಪ್ರಮುಖ ಆರೋಪಿ ಇತ್ತೀಚೆಗಷ್ಟೇ ಕೇರಳ ಪೊಲೀಸರಿಂದ ಬಂಧಿತಳಾಗಿದ್ದ ಕುಖ್ಯಾತ ನಕ್ಸಲ್ ನಾಯಕಿ ಶ್ರೀಮತಿ(೨೮) ಎಂಬಾಕೆಯನ್ನು ಕಾರ್ಕಳ ಪೊಲೀಸರು ಬಾಡಿ ವಾರಂಟ್ ಪಡೆದು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಎರಡು ದಿನಗಳ ಪೊಲೀಸ್ ಕಸ್ಟಡಿ…

ಕೇರಳದಲ್ಲಿ ಬಂಧಿತಳಾಗಿದ್ದ ನಕ್ಸಲ್ ಶ್ರೀಮತಿಯನ್ನು ಕಾರ್ಕಳ ಕೋರ್ಟಿಗೆ ಹಾಜರುಪಡಿಸಿದ ಪೊಲೀಸರು: ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ

ಕಾರ್ಕಳ: ಇತ್ತೀಚೆಗಷ್ಟೇ ಕೇರಳ ಪೊಲೀಸರಿಂದ ಬಂಧಿತಳಾಗಿದ್ದ ಕುಖ್ಯಾತ ನಕ್ಸಲ್ ನಾಯಕಿ ಶ್ರೀಮತಿ(26) ಎಂಬಾಕೆಯನ್ನು ಕಾರ್ಕಳ ಪೊಲೀಸರು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದಿದ್ದು ಅತ್ಯಂತ ಬಿಗುಭದ್ರತೆಯಲ್ಲಿ ಕಾರ್ಕಳದ ಕೋರ್ಟಿಗೆ ಹಾಜರುಪಡಿಸಿದರು. ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದ ಶೃಂಗೇರಿ ದೇವಳಕೊಪ್ಪ…

ಕಾರ್ಕಳ: ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ ಎನ್ನುವ ಕಾರಣಕ್ಕೆ ಕತ್ತಿಯಿಂದ ಕಡಿದು ಕೊಲೆ ಯತ್ನ!

ಕಾರ್ಕಳ: ನ್ಯಾಯಾಲಯದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಾಕ್ಷಿ ನುಡಿಯಲು ಹೋಗಿದ್ದ ಸಾಕ್ಷಿದಾರನಿಗೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಕಾರ್ಕಳದ ಅನಂತಶಯನದ ಬಳಿ ಸೋಮವಾರ ರಾತ್ರಿ ಸಂಭವಿಸಿದೆ. ಹಳೆ ದ್ವೇಷದ ಹಿನ್ನಲೆಯಲ್ಲಿ ಈ ಕೃತ್ಯ ನಡೆದಿದ್ದು, ಕಾರ್ಕಳ ಪೊಲೀಸರು ಕೊಲೆಯತ್ನ ಪ್ರಕರಣ…

ರೆಂಜಾಳ: ಪಾಲುದಾರಿಕೆ ಉದ್ಯಮದಲ್ಲಿ ತಕರಾರು: ಹಣಕಾಸಿನ ವಿಚಾರದಲ್ಲಿ ಜಗಳ

ಕಾರ್ಕಳ: ಜಂಟೀ ಪಾಲುದಾರಿಕೆಯಲ್ಲಿ ನಡೆಸಿದ ಉದ್ಯಮದಲ್ಲಿ ಇಬ್ಬರು ಮಹಿಳಾ ಉದ್ಯಮಿಗಳ ನಡುವೆ ಹಣಕಾಸಿನ ವಿಚಾರದಲ್ಲಿ ತಕರಾರು ನಡೆದಿದ್ದು, ಬಳಿಕ ಮಾತಿನ ಚಕಮಕಿ ನಡೆದ ಕೊಲೆ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಮಂದ್ರಪಾಲ್ ಎಂಬಲ್ಲಿ ಪಾವನಿ ಮತ್ತು ಅಕ್ಷತಾ…

ಅಜೆಕಾರು: ಸ್ಕೂಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು

ಕಾರ್ಕಳ: ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮುಂಜಾನೆ ಮೃತಪಟ್ಟಿದ್ದಾರೆ‌. ಅಂಡಾರು ಗ್ರಾಮದ ಹಲೆಕ್ಕಿ ನಿವಾಸಿ ನರಸಿಂಹ ನಾಯಕ್ ಎಂಬವರ ಪುತ್ರ ಶಯನ್ (22) ಎಂಬ ಯುವಕ ಮೃತಪಟ್ಟ ದುರ್ದೈವಿ.…

ಮುನಿಯಾಲು: ವಿದ್ಯುತ್ ಕಂಬಕ್ಕೆ ಆಂಬುಲೆನ್ಸ್ ಡಿಕ್ಕಿ: ಚಾಲಕ ಸಹಾಯಕ ಪವಾಡಸದೃಶ ಪಾರು

ಹೆಬ್ರಿ: ವಿದ್ಯುತ್ ಕಂಬಕ್ಕೆ ಆಂಬುಲೆನ್ಸ್ ವಾಹನ ಡಿಕ್ಕಿಯಾಗಿ ವಿದ್ಯುತ್ ಕಂಬ ತುಂಡಾದ ಘಟನೆ ಮಂಗಳವಾರ ಮುಂಜಾನೆ ಮುನಿಯಾಲಿನ ಜಂಗಮೇಶ್ವರ ಮಠದ ಕ್ರಾಸ್ ಬಳಿ ಸಂಭವಿಸಿದೆ. ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್ ಇದಾಗಿದ್ದು, ವಾಹನದಲ್ಲಿ ಚಾಲಕ ಹಾಗೂ ಸಹಾಯಕ ಮಾತ್ರ…

ಮಿಯ್ಯಾರು:ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು

ಕಾರ್ಕಳ:ತೆಂಗಿನ ಕಾಯಿ ಕೀಳಲು ಮರ ಏರಿದ ಕಾರ್ಮಿಕರೊಬ್ಬರು ಆಯತಪ್ಪಿ ಮರದಿಂದ ಕೆಳಕ್ಕೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮಂಗಳೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಅಶೋಕ (53) ಎಂಬವರು ಮೃತಪಟ್ಟ ದುರ್ದೈವಿ. ಅವರು…

ಮಂಗಳೂರು: ಶಾಲಾ ಮಕ್ಕಳಿಗೆ ಪಾಠ ಮಾಡುವ ವೇಳೆ ಶಿಕ್ಷಿಕಿಯಿಂದ ಶ್ರೀರಾಮನ ಕುರಿತು ಅವಹೇಳನ: ಪೋಷಕರು ಹಿಂದೂ ಕಾರ್ಯಕರ್ತರು ಆಕ್ರೋಶ

ಮಂಗಳೂರು : ಮಂಗಳೂರಿನ ಜೆರೋಸಾ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬಳು ಅಯೋಧ್ಯೆ ರಾಮಮಂದಿರ ಹಾಗೂ ಪ್ರಭು ಶ್ರೀರಾಮನ ಬಗ್ಗೆ ಮಕ್ಕಳಲ್ಲಿ ಅವಹೇಳನಕಾರಿ ಮಾತುಗಳನ್ನಾಡಿದ್ದು,ಈ ಕುರಿತು ಮಕ್ಕಳ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಕುರಿತು ಪೋಷಕರೊಬ್ಬರು…

ಉತ್ತರಾಖಂಡದಲ್ಲಿ ಭುಗಿಲೆದ್ದ ಹಿಂಸಾಚಾರ: ಅನಧಿಕೃತ ಮದರಸಾಗಳ ತೆರವು ಕಾರ್ಯಾಚರಣೆ ವೇಳೆ ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು: ಕಂಡಲ್ಲಿ ಗುಂಡಿಕ್ಕಲು ಆದೇಶ!

ಹಲ್ದ್ವಾನಿ(ಉತ್ತರಾಖಂಡ): ಅಕ್ರಮ ಮದರಸಾಗಳನ್ನು ತೆರವುಗೊಳಿಸುವ ವೇಳೆ ಉಂಟಾದ ಪ್ರತಿಭಟನೆ ದಿಢೀರ್ ಹಿಂಸಾಚಾರಕ್ಕೆ ತಿರುಗಿದ್ದು,ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಿದ್ದು ಹಿಂಸಾಚಾರ ಭುಗಿಲೆದ್ದಿದೆ. ಅನಧಿಕೃತ ಮದರಸಾವವನ್ನು ಕೆಡವಿದ ನಂತರ ಕಲ್ಲು ತೂರಾಟ ನಡೆಸಿದ್ದು ಮಾತ್ರವಲ್ಲದೇ ಸಿಕ್ಕಸಿಕ್ಕ ವಾಹನಗಳಿಗೂ ಬೆಂಕಿ…

ಕೇಂದ್ರ ಸಚಿವೆ ‘ನಿರ್ಮಲಾ ಸೀತಾರಾಮನ್’ ಹೆಸರಲ್ಲಿ ವಂಚನೆ: ಖತರ್ನಾಕ್ ವಂಚಕಿಯಿಂದ ಕೋಟಿಗಟ್ಟಲೆ ಹಣ ಲೂಟಿ..!

ಬೆಂಗಳೂರು : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್ ಬಿ ಐ ಹೆಸರು ಹೇಳಿಕೊಂಡು ವಂಚನೆ ಎಸಗಿ ಕೋಟಿ ಕೋಟಿ ಹಣ ಲೂಟಿ ಮಾಡಿದ ಘಟನೆ ನಡೆದಿದೆ. ಬೆಂಗಳೂರು ಹೊರವಲಯದ ಅನೇಕಲ್ ನಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಹೊಸೂರು…