Category: ಅಪರಾಧ

ಕಾಡು ಹಂದಿ ದಾಳಿಗೆ ರೈತ ಸ್ಥಳದಲ್ಲೇ ಸಾವು: ಇಬ್ಬರು ಮಹಿಳೆಯರ ಸ್ಥಿತಿ ಗಂಭೀರ

ಹಾಸನ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕಾಡುಹಂದಿ ದಾಳಿ ನಡೆಸಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ಸೋಮವಾರ ಸಂಭವಿಸಿದೆ. ಹೊಳೇನರಸೀಪುರ ತಾಲೂಕಿನ ಹಾರಗೌಡನಹಳ್ಳಿಯಲ್ಲಿ ಜಮೀನಿನಲ್ಲಿ ರೈತ ರಾಜೇಗೌಡ(63) ಎಂಬವರು…

ಕಾಪು ಲೀಲಾಧರ ಶೆಟ್ಟಿ ದತ್ತುಪುತ್ರಿ ನಾಪತ್ತೆ ಪ್ರಕರಣ:ನಾಲ್ವರು ಆರೋಪಿಗಳ ಬಂಧನ:ಬಂಧಿತರ ವಿರುದ್ಧ ಪೋಕ್ಸೊ,ಅತ್ಯಾಚಾರ ಕೇಸ್

ಕಾಪು, ಡಿ.18:ಕಳೆದ ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ದಂಪತಿಯ ಅಪ್ರಾಪ್ತ ವಯಸ್ಸಿನ ಪುತ್ರಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಕಾಪು ಪೊಲೀಸರು ಕಾಸರಗೋಡಿನ ಕುಂಬಳೆ ಎಂಬಲ್ಲಿ ಬಂಧಿಸಿದ್ದಾರೆ. ಬಂಧಿತರನ್ನು ಆಕೆಯ ಸ್ನೇಹಿತ ಶಿರ್ವ…

ಎಳ್ಳಾರೆ: ಸ್ಕೂಟರ್- ಗೂಡ್ಸ್ ವಾಹನ ಡಿಕ್ಕಿ: ಯುವತಿಗೆ ಗಾಯ

ಕಾರ್ಕಳ: ಸ್ಕೂಟರಿಗೆ ಗೂಡ್ಸ್ ವಾಹನ ಡಿಕ್ಕಿಯಾದ ಪರಿಣಾಮ ಸ್ಕೂಟರಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಅಶ್ವಿನಿ (18) ಎಂಬವರು ಗಾಯಗೊಂಡ ಯುವತಿ. ಅವರು ಶನಿವಾರ ಬೆಳಗ್ಗೆ 10.30 ರ ಸುಮಾರಿಗೆ ತನ್ನ ತಾಯಿ ಆಶಾ…

ಉಡುಪಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳ ದಾಳಿ

ಉಡುಪಿ ಡಿ.17 :ಉಡುಪಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದು ಜಿಲ್ಲೆಯ ವಿವಿಧೆಡೆ ಧಿಡೀರ್ ದಾಳಿ ನಡೆಸಿ ನಿಯಮಬಾಹಿರ ಕ್ಲಿನಿಕ್ ಹಾಗೂ ಲ್ಯಾಬ್‌ಗಳ ವಿರುದ್ಧ ನಕಲಿ ವೈದ್ಯ ತಡೆ ಹಾಗೂ ಕೆ.ಪಿ.ಎಂ.ಇ…

ಗರ್ಭಪಾತಕ್ಕೆ ಒಪ್ಪದ ಪ್ರಿಯತಮೆ: ಕತ್ತು ಹಿಸುಕಿ, ದೇಹವನ್ನು ತುಂಡರಿಸಿದ ಲಿವ್ ಇನ್ ಪಾರ್ಟನರ್

ಉತ್ತರಪ್ರದೇಶ ಡಿ.17 :ವಿವಾಹಿತ ಮಹಿಳೆಯೊಬ್ಬಳನ್ನು ಆಕೆಯ ಲಿವ್ ಇನ್ ಪಾರ್ಟನರ್ ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು , ಪೊಲೀಸರು ಬೆಚ್ಚಿಬೀಳಿಸುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಡಿಯೋರಿಯಾ ಜಿಲ್ಲೆಯ ಭಾಲುವಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಬರೌಲಿ ಗ್ರಾಮದಲ್ಲಿ ಈ ಭೀಕರ…

ಬೈಲೂರು: ಬುಲೆಟ್ ಬೈಕ್ ಡಿಕ್ಕಿಯಾಗಿ ಪಾದಾಚಾರಿ ವ್ಯಕ್ತಿ ಗಂಭೀರ

ಕಾರ್ಕಳ ಡಿ.16: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಿಂದಿನಿAದ ಅತೀವೇಗವಾಗಿ ಬಂದ ಬುಲೆಟ್ ಬೈಕ್ ಡಿಕ್ಕಿಹೊಡೆದ ಪರಿಣಾಮ ಪಾದಾಚಾರಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಕಳ ತಾಲೂಕಿನ ಬೈಲೂರು ಪೇಟೆಯಲ್ಲಿ ಶುಕ್ರವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು ಸುಧಾಕರ(40) ಎಂಬವರು ಗಂಭೀರವಾಗಿ…

ಕಾರ್ಕಳ:ಕಾರು ಚಾಲಕನ ಪ್ರಮಾದಕ್ಕೆ ಅಮಾಯಕ ಸ್ಕೂಟರ್ ಸವಾರ ಬಲಿ: ಕಾರಿನ ಡೋರ್ ಬಡಿದು ಸವಾರ ಸ್ಥಳದಲ್ಲೇ ಸಾವು

ಕಾರ್ಕಳ ಡಿ.16: ಕಾರು ಚಾಲಕನೊಬ್ಬ ಹಿಂದುಮುAದೆ ಗಮನಿಸದೇ ಕಾರಿನ ಡೋರ್ ತೆಗೆದ ಸಣ್ಣ ತಪ್ಪಿನಿಂದಾಗಿ ಅಮಾಯಕ ಸ್ಕೂಟರ್ ಸವಾರೊಬ್ಬರ ಜೀವವೇ ಬಲಿಯಾಗಿರುವ ದಾರುಣ ಘಟನೆ ಕಾರ್ಕಳದ ಸಾಲ್ಮರ ಎಂಬಲ್ಲಿ ಡಿ.15ರಂದು ಶುಕ್ರವಾರ ನಡೆದಿದೆ. ಸ್ಕೂಟರ್ ಸವಾರ ಯಶವಂತ ಶೆಣೈ (70) ಎಂಬ…

ಕಾರ್ಕಳದಲ್ಲಿ ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರ ದಾಳಿ: ಓರ್ವ ಮಹಿಳೆ ಸೇರಿ ಐವರ ಬಂಧನ, ಓರ್ವ ಮಹಿಳೆಯ ರಕ್ಷಣೆ

ಕಾರ್ಕಳ: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಪಟ್ಲ ದಾನಿಯಾ ಪಿರೇರಾ ಎಂಬವಬರ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸ್ ನಿರೀಕ್ಷಕ ಟಿ.ಡಿ ನಾಗರಾಜ್ ನೇತೃತ್ವದ ಪೊಲೀಸರ ತಂಡ ದಾಳಿ ಗುರುವಾರ ದಾಳಿ ನಡೆಸಿ ಓರ್ವ…

ಪುತ್ತೂರು: ಡಿಆರ್‌ಡಿಒ ಯುವ ವಿಜ್ಞಾನಿ ಆತ್ಮಹತ್ಯೆ

ಪುತ್ತೂರು ಡಿ.15: ಪುತ್ತೂರು ತಾಲೂಕಿನಲ್ಲಿ ಯುವ ವಿಜ್ಞಾನಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ನಿವಾಸಿ ಭರತ್ ಕಲ್ಲರ್ಪೆ (24) ಗುರುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವ ವಿಜ್ಞಾನಿ. ಭರತ್ ಹೈದರಾಬಾದ್‌ನ ಡಿಆರ್‌ಡಿಒ ಸಂಸ್ಥೆಯಲ್ಲಿ…

ಅಲಹಾಬಾದ್​ ವಿಶ್ವವಿದ್ಯಾಲಯದ ಹಾಸ್ಟೆಲ್​ ಕೊಠಡಿಯಲ್ಲಿ ಬಾಂಬ್ ತಯಾರಿಸುತ್ತಿದ್ದ ವೇಳೆ ಸ್ಫೋಟ: ಖತರ್ನಾಕ್ ವಿದ್ಯಾರ್ಥಿಯ ಕೈ ಛಿದ್ರ

ಅಲಹಾಬಾದ್‌: ಹಾಸ್ಟೆಲ್‌ ಕೊಠಡಿಯೊಳಗೆ ಕುಳಿತುಕೊಂಡು ವಿದ್ಯಾರ್ಥಿಯೊಬ್ಬ ಬಾಂಬ್ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಾಗಲೇ ಬಾಂಬ್ ಸ್ಫೋಟಗೊಂಡು ಆತ ಗಂಭೀರವಾಗಿ ಗಾಯಗೊಂಡ ಆಘಾತಾಕಾರಿ ಘಟನೆ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ನಡೆದಿದೆ. ಹಾಸ್ಟೆಲ್‌ನಲ್ಲಿ ಬಾಂಬ್ ತಯಾರಿಸುತ್ತಿದ್ದ ವಿದ್ಯಾರ್ಥಿಯನ್ನು ಪ್ರಭಾತ್ ಯಾದವ್ ಎಂದು ಗುರುತಿಸಲಾಗಿದೆ. ಈತ ಅಲಾಹಾಬಾದ್‌ ವಿಶ್ವವಿದ್ಯಾಲಯದ…