Category: ಅಪರಾಧ

ತೀರ್ಥಹಳ್ಳಿ ಅರಳಸುರಳ್ಳಿಯ ಮನೆಯಲ್ಲಿ ಅಗ್ನಿ ದುರಂತ: ಒಂದೇ ಕುಟುಂಬದ ಮೂವರು ಸಜೀವ ದಹನ: ಆತ್ಮಹತ್ಯೆ ಶಂಕೆ

ತೀರ್ಥಹಳ್ಳಿ :ಅಗ್ನಿ ಅವಘಡದಿಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅರಳಸುರುಳಿಯ ಕಲ್ಲೋಣಿ ಕೆಕೋಡ ಎಂಬಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಅರ್ಚಕ ವೃತ್ತಿ ಮಾಡುತ್ತಿದ್ದ ರಾಘವೇಂದ್ರ ಕೆಕೋಡ (65) ಪತ್ನಿಯ ನಾಗರತ್ನ (55) ಹಿರಿಯ…

ಅತ್ತಿಬೆಲೆ ಪಟಾಕಿ ದುರಂತ: ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ: ಒಂದೇ ಗ್ರಾಮದ 8 ವಿದ್ಯಾರ್ಥಿಗಳು ದಾರುಣ ಸಾವು: ಇಂದು ದುರಂತ ಸ್ಥಳಕ್ಕೆ ಸಿಎಂ ಭೇಟಿ

ಬೆಂಗಳೂರು : ನಗರದ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಿನ್ನೆ ನಡೆದ ಪಟಾಕಿ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಈ ಕಾರ್ಮಿಕರ ಪೈಕಿ 8 ಮಂದಿ ವಿದ್ಯಾರ್ಥಿಗಳು ಕೂಡ ಬಲಿಯಾಗಿದ್ದು,ಈ ವಿದ್ಯಾರ್ಥಿಗಳು ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆ ಅಮ್ಮಪಟ್ಟಿ ಗ್ರಾಮದವರು…

ಹೆಬ್ರಿ ಸಂತೆಕಟ್ಟೆ: ಗ್ರಾಮ ವನ್ ಕೇಂದ್ರದ ಕಂಪ್ಯೂಟರ್ ಆಪರೇಟರ್ ಗೆ ಮಾಲಕನ ಜತೆಗೆ ಅಕ್ರಮ ಸಂಬಂಧದ ಆರೊಪ ಹೊರಿಸಿ ಜಾತಿ ನಿಂದನೆ: ಸೈಬರ್ ಮಾಲಕನ ಪತ್ನಿ ವಿರುದ್ಧ ದೂರು

ಹೆಬ್ರಿ: ಗ್ರಾಮ ವನ್ ಸೇವಾ ಕೇಂದ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಪರಿಶಿಷ್ಟ ಪಂಗಡದ ಯುವತಿಗೆ ಸೇವಾ ಕೇಂದ್ರದ ಮಾಲಕನ ಜತೆಗೆ ಅಕ್ರಮ ಸಂಬಂಧವಿದೆ ಎನ್ನುವ ಸುಳ್ಳು ಆರೋಪ ಮಾಡಿರುವ ವಿಚಾರದಲ್ಲಿ ಮಾಲಕನ ಪತ್ನಿಯ ವಿರುದ್ಧ ಯುವತಿ ನೀಡಿರುವ ದೂರಿನ ಮೇರೆಗೆ ಹೆಬ್ರಿ ಪೊಲೀಸ್…

ಪರೀಕ್ಷೆಯಲ್ಲಿ ಕಡಿಮೆ ಅಂಕ ಕೊಟ್ಟಿದ್ದಕ್ಕೆ ನೀರಿನ ಬಾಟಲ್ ಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು!: ಶಿಕ್ಷಕಿಯರಿಬ್ಬರು ಅಸ್ವಸ್ಥ

ಮಂಗಳೂರು: ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಾರೆ ಎನ್ನುವ ಕಾರಣಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿನಿಯರಿಬ್ಬರು ಶಿಕ್ಷಕರ ಕುಡಿಯುವ ನೀರಿನ ಬಾಟಲ್ ಗೆ ಅವಧಿ ಮೀರಿದ ಮಾತ್ರೆಗಳನ್ನು ಹಾಕಿದ ಪರಿಣಾಮ ಅದೇ ನೀರು ಕುಡಿದು ಓರ್ವ ಶಿಕ್ಷಕ ಹಾಗೂ ಶಿಕ್ಷಕಿ ಅಸ್ವಸ್ಥಗೊಂಡಿರುವ ಘಟನೆ ದಕ್ಷಿಣ ಕನ್ನಡ…

ಮುದ್ರಾಡಿ: ಅಪರಿಚಿತ ವಾಹನ ಡಿಕ್ಕಿಯಾಗಿ  ರಸ್ತೆ ದಾಟುತ್ತಿದ್ದ ಚಿರತೆ ಸಾವು

ಕಾರ್ಕಳ:ರಸ್ತೆ ದಾಟುತ್ತಿದ್ದ ಚಿರತೆಯೊಂದಕ್ಕೆ ವೇಗವಾಗಿ ಸಾಗುತಿದ್ದ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದೆ. ಹೆಬ್ರಿ ತಾಲೂಕಿನ ಮುದ್ರಾಡಿ ಸಮೀಪದ ಭಕ್ರೆಮಠ ಕ್ರಾಸ್ ಬಳಿ ಗುರುವಾರ ಸಂಜೆ ನಡೆದ ಅಪಘಾತಕ್ಕೆ ಚಿರತೆ ಬಲಿಯಾಗಿದೆ. ಆಹಾರ ಅರಸಿ ನಾಡಿಗೆ ಬಂದಿದ್ದ ಚಿರತೆ…

ಮುನಿಯಾಲು: ಗೇರುಬೀಜ ಕಾರ್ಖಾನೆಯಲ್ಲಿ ಕಳ್ಳತನ: 24 ಲಕ್ಷ ರೂ ಮೌಲ್ಯದ ಗೇರುಬೀಜ ಕಳವು

ಹೆಬ್ರಿ : ತಾಲೂಕಿನ ವರಂಗ ಗ್ರಾಮದ ಮುನಿಯಾಲಿನಲ್ಲಿರುವ ಗುರುರಾಜ್ ಎಕ್ಸ್ ಪೋರ್ಟ್ ಗೇರುಬೀಜ ಫ್ಯಾಕ್ಟರಿಯಲ್ಲಿ 24 ಲಕ್ಷ ರೂ ಮೌಲ್ಯದ ಗೇರು ಬೀಜವನ್ನು ಕಳ್ಳರು ಕಳಗೈದಿರುವ ಘಟನೆ ನಡೆದಿದೆ. ಕಾರ್ಖಾನೆಯ ಮಾಲೀಕರು ಕಳೆದ ಸೆಪ್ಟಂಬರ್ 18ರಂದು ಸಂಜೆ 7 ಗಂಟೆಗೆ ಗೇರುಬೀಜ…

ಮೂಲ್ಕಿ :ದರೋಡೆ ಪ್ರಕರಣ ಭೇದಿಸಿದ ಪೊಲೀಸರು- 7ಲಕ್ಷ ರೂ. ಮೌಲ್ಯದ ಸೊತ್ತು ಸಹಿತ ಆರೋಪಿಗಳ ಬಂಧನ

ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರು 7 ಲಕ್ಷ ರೂ. ಮೌಲ್ಯದ ಸೊತ್ತು ಸಹಿತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲ್ಕಿ ಬೆಳ್ಳಾಯರು ಗ್ರಾಮದ ಕೋಲ್ನಾಡು ಚಂದ್ರಮೌಳೀಶ್ವರ ರಸ್ತೆಯ ನಿವಾಸಿ ವಸಂತಿ ಶೆಟ್ಟಿರವರ ಕುತ್ತಿಗೆಯಲ್ಲಿದ್ದ 40…

ದುರ್ಗ: ನಾಪತ್ತೆಯಾಗಿದ್ದ ಯುವಕ ಹೊಳೆಯಲ್ಲಿ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ

ಕಾರ್ಕಳ:ದುರ್ಗ ಗ್ರಾಮದ ಸಂದೇಶ್ ಶೆಟ್ಟಿ ಎಂಬವರು ಕಳೆದ 5 ದಿನಗಳ ಹಿಂದೆ ನಾಪತ್ತೆಯಾಗಿದ್ದು ಅವರ ಶವವು ಬುಧವಾರ ಮುಂಜಾನೆ ಕಾವೇರಡ್ಕ ಬಳಿಯ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂದೇಶ್ ಶೆಟ್ಟಿ ಕೂಲಿ ಕಾರ್ಮಿಕರಾಗಿದ್ದು,ಕಳೆದ ಶನಿವಾರದಂದು ನಾಪತ್ತೆಯಾಗಿದ್ದರು.ಇವರ ಪತ್ತೆಗೆ ಮನೆಯವರು ಹಾಗೂ ಸ್ಥಳೀಯರು…

ಬಾಲಕಿಗೆ ಲೈಂಗಿಕ ಕಿರುಕುಳ, ಜೀವ ಬೆದರಿಕೆ:ಇಬ್ಬರು ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಕಾರ್ಕಳ:ದಲಿತ ಸಮುದಾಯದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣದ ಕುರಿತಂತೆ ಕಾರ್ಕಳ ತಾಲೂಕಿನ ನಿಂಜೂರಿನ ಇಬ್ಬರು ಆರೋಪಿಗಳ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿ ಸುಜಿತ್ ಪೂಜಾರಿ ಎಂಬಾತ ಬಾಲಕಿ ಶಾಲೆಯಿಂದ ಮನೆಗೆ ಹೋಗುತ್ತಿದ್ದ ವೇಳೆ…

ಪುಣೆ ಮಾಡ್ಯೂಲ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಐಸಿಸ್ ಉಗ್ರ: ಶಹನ್‌ವಾಜ್ ಅಲಿಯಾನ್ ಶಫಿ ದೆಹಲಿಯಲ್ಲಿ ಬಂಧನ

ನವದೆಹಲಿ :ದೆಹಲಿಯ ವಿಶೇಷ ಪೊಲೀಸ್ ತಂಡವು ಶಂಕಿತ ಐಸಿಸ್ ಉಗ್ರ ಶಹನ್‌ವಾಜ್ ಅಲಿಯಾಸ್ ಶಫಿಯನ್ನು ದೆಹಲಿಯಲ್ಲಿ ಬಂಧಿಸಿದೆ. ಪೊಲೀಸರ ಪ್ರಕಾರ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಶಹನ್‌ವಾಜ್ ಮೂಲತಃ ದೆಹಲಿಯವರು. ಪುಣೆ ಪೊಲೀಸರ ವಶದಿಂದ ತಪ್ಪಿಸಿಕೊಂಡು ದೆಹಲಿಯಲ್ಲಿ ವಾಸವಾಗಿದ್ದರು. ಸದ್ಯ ಈತನನ್ನು ಬಂಧಿಸಿರುವ…