Category: ಅಪರಾಧ

ಪುತ್ತೂರು : ಬೈಕ್ ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಭೀಕರ ಅಪಘಾತ : ತಂದೆ ಮಗ ಮೃತ್ಯು

ಪುತ್ತೂರು : ಬೈಕ್ ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿ ಸಹಸವಾರ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಕುವೆತ್ತಿಲ ಎಂಬಲ್ಲಿ ರವಿವಾರ ನಡೆದಿದೆ.…

ಕಾರ್ಕಳ: ಮೆಹೆಂದಿ ಶಾಸ್ತ್ರದ ಕಾರ್ಯಕ್ರಮದಲ್ಲಿ ದುರಂತ: ಡಿಜೆ ಸದ್ದಿಗೆ ಹೆಜ್ಜೆ ಹಾಕುತ್ತಿದ್ದಾಗಲೇ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಕುಸಿದು ಬಿದ್ದು ಸಾವು

ಕಾರ್ಕಳ: ಮದುವೆಯ ಮೆಹೆಂದಿ ಕಾರ್ಯಕ್ರಮದಲ್ಲಿ ಕುಣಿದು ಸಂಭ್ರಮಿಸುತ್ತಿದ್ದಾಗಲೇ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಬುಡನ್’ಬೆಟ್ಟು ಎಂಬಲ್ಲಿ ಸಂಭವಿಸಿದೆ. ಉಡುಪಿಯ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಮೃತಪಟ್ಟ ಯುವಕ. ಮಿಯ್ಯಾರಿನ ಬುಡನ್’ಬೆಟ್ಟು ಮನೆಯೊಂದರಲ್ಲಿ…

ಕಾರ್ಕಳ: ಮೀನು ಸಾಗಾಟದ ಟ್ರಕ್ ಮೇಲೆ ಕಲ್ಲು ತೂರಾಟ ಪ್ರಕರಣ:  ಮೂವರು ಆರೋಪಿಗಳ ಬಂಧನ 

ಕಾರ್ಕಳ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಕರೆನೀಡಿದ ದಿನ ಕಾರ್ಕಳ ತಾಲೂಕಿನಲ್ಲಿ ಮೀನು ಸಾಗಾಟದ ಲಾರಿಯೊಂದಕ್ಕೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕಾರ್ಕಳ ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.…

ನೆಲ್ಯಾಡಿ: ಮನೆಯ ಅಂಗಳದಲ್ಲಿಯೇ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಬೆಳ್ತಂಗಡಿ : ಚಾಕುವಿನಿಂದ ಇರಿದು ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ರಾತ್ರಿ ನೆಲ್ಯಾಡಿ ಹೊರ ಠಾಣೆ ವ್ಯಾಪ್ತಿಯ ಮಾದೇರಿ ಸಮೀಪ ನಡೆದಿದೆ. ಮೃತ ಯುವಕನನ್ನು ಮಾದೇರಿ ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ಮನೆಯ ಅಂಗಳದಲ್ಲಿ ಶರತ್ ನನ್ನು ಚಾಕುವಿನಿಂದ ಇರಿದು…

ಉಡುಪಿ : ಮೆಹಂದಿ ಕಾರ್ಯಕ್ರಮದಲ್ಲಿ ತಡರಾತ್ರಿಯವರೆಗೂ ಡಿಜೆ ಸೌಂಡ್ಸ್ ; ಪ್ರಕರಣ ದಾಖಲು

ಉಡುಪಿ : ಮೆಹಂದಿ ಕಾರ್ಯಕ್ರಮದಲ್ಲಿ ಅನುಮತಿ ಇಲ್ಲದೆ ತಡರಾತ್ರಿಯವರೆಗೆ ಕರ್ಕಶವಾದ ಡಿಜೆ ಸೌಂಡ್ಸ್ ಹಾಕಿ ಸಾರ್ವಜನಿಕರಿಗೆ ಸಮಸ್ಯೆ ಉಂಟು ಮಾಡಿದವರ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಡವೂರು ಗ್ರಾಮ ಕಲ್ಮಾಡಿ ಬಳಿಯ ಮನೆಯಲ್ಲಿ ಮೇ 8ರಂದು ನಡೆಯುತ್ತಿದ್ದ ಮೆಹೆಂದಿ…

ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಆಕ್ಷೇಪ?: ಕಾರ್ಕಳದ ಕಾಲೇಜಿನ ಹಾಸ್ಟೆಲ್ ನಲ್ಲಿ ಆಕ್ಷೇಪಾರ್ಹ ಗೋಡೆ ಬರಹ

ಕಾರ್ಕಳ: ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಆಕ್ಷೇಪಿಸಿ ಕಾರ್ಕಳದ ಪ್ರತಿಷ್ಠಿತ ಕಾಲೇಜಿನ‌ ಹಾಸ್ಟೆಲ್ ಒಂದರಲ್ಲಿ ದೇಶದ ಅಖಂಡತೆಗೆ ಧಕ್ಕೆ ಬರುವ ರೀತಿಯ ಆಕ್ಷೇಪಾರ್ಹ ಗೋಡೆಬರಹ ಬರೆಯಲಾಗಿದೆ ಎನ್ನುವ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂಲಗಳ…

ನಂದಳಿಕೆ: ತಲೆಗೆ ಕಲ್ಲು ಬಡಿದು ಕಾರ್ಮಿಕ ಸಾವು

ಕಾರ್ಕಳ: ಕಲ್ಲುಕೋರೆಯಲ್ಲಿ ಬಂಡೆ ಒಡೆಯುವ ವೇಳೆ ಕಲ್ಲೊಂದು ಕಾರ್ಮಿಕನ ತಲೆಗೆ ಬಡಿದು ಆತ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನಂದಳಿಕೆಯಲ್ಲಿ ಸಂಭವಿಸಿದೆ. ರಾಯಚೂರು ಮೂಲದ ಶಿವರಾಜ (27ವ) ಎಂಬಾತ ಮೃತಪಟ್ಟ ಕಾರ್ಮಿಕ. ಶಿವರಾಜ ಮೇ 8…

ಹೆಬ್ರಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದು  ಆತ್ಮಹತ್ಯೆ

ಹೆಬ್ರಿ: ಹೆಬ್ರಿ ಗ್ರಾಮದ ಮಠದಬೆಟ್ಟು ಎಂಬಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠದಬೆಟ್ಟು ನಿವಾಸಿ ಬೋಜ (68) ಅವರು ಅನಾರೋಗ್ಯದಿಂದ ಬಳಲಲುತ್ತಿದ್ದು ಅದೇ ಕಾರಣಕ್ಕೆ ಮನನೊಂದು ಬುಧವಾರ ರಾತ್ರಿ ಮನೆಯ ದೇವರ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ…

ಕಾಂತಾರಾ ಭಾಗ-1 ಚಿತ್ರತಂಡದ ಜೂನಿಯರ್ ಆರ್ಟಿಸ್ಟ್ ಮೃತ್ಯು

ಕೊಲ್ಲೂರು: ರಿಷಬ್ ಶೆಟ್ಟಿ ನಿರ್ದೇಶದ ಕಾಂತಾರಾ – 1 ಚಿತ್ರದ ಶೂಟಿಂಗ್ ವೇಳೆ ಜೂನಿಯರ್ ಆರ್ಟಿಸ್ಟ್ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತ ದುರ್ದೈವಿಯನ್ನು ಕಪಿಲ್ ಎಂದು ಗುರುತಿಸಲಾಗಿದೆ. ಇವರು ಕೇರಳ ಮೂಲದವರಾಗಿದ್ದು ಅವರನ್ನು ಈ ಚಿತ್ರದಲ್ಲಿ ಜೂನಿಯರ್ ಕಲಾವಿದರಾಗಿ ಅವರು…

ಕುಂದಾಪುರ:IPL ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ದಾಳಿ:  ನಗದು ವಶಕ್ಕೆ

ಕುಂದಾಪುರ: IPL ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವರ ಮೇಲೆ ಕುಂದಾಪುರ ಎಸ್‌ಐ ನಂಜಾನಾಯ್ಕ ಎನ್. ದಾಳಿ ಮೇಲೆ ದಾಳಿ ನಡೆಸಿ ನಗದು, ಸೊತ್ತು ವಶಪಡಿಸಿಕೊಂಡಿದ್ದಾರೆ.ದಾಳಿ ವೇಳೆ ಸತೀಶ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು, ವಿಕ್ಕಿಯಾನೆ ವಿಕಾಸ್ ಹಾಗೂ ವಿವೇಕ ಎಂಬ ಇಬ್ಬರು ಪರಾರಿಯಾಗಿದ್ದಾರೆ.…