Category: ಅಪರಾಧ

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ : ಮೂವರು ಆರೋಪಿಗಳ ಬಂಧನ

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಕುಂದಾಪುರದ ಕೊರ್ಗಿಯ ಸಂದೀಪ್ (34), ಬೇಳೂರು ಶ್ರೀರಾಜ್(33), ಮೋಳಹಳ್ಳಿ ಮಧುಕರ್ (44) ಎಂದು ಗುರುತಿಸಲಾಗಿದೆ. ಆರೋಪಿಗಳು ನಗರದ ಅಜ್ಜರಕಾಡು ಭುಜಂಗ…

ಮಂಗಳೂರು: ಪಹಲ್ಗಾಮ್ ಉಗ್ರರ ದಾಳಿ ಸಮರ್ಥಿಸಿ ಫೇಸ್ ಬುಕ್‌ನಲ್ಲಿ ಪೋಸ್ಟ್: ಪ್ರಕರಣ ದಾಖಲು

ಮಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯನ್ನು ಸಮರ್ಥಿಸಿಕೊಂಡು ಪೋಸ್ಟ್? ಹಾಕಿದ್ದ ಫೇಸ್ ಬುಕ್ ಪೇಜ್ ವಿರುದ್ಧ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲದ ಸತೀಶ್ ಕುಮಾರ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಬಿಎನ್‌ಎಸ್ ಸೆಕ್ಷನ್…

ಮಂಗಳೂರಲ್ಲಿ ಚಲಿಸುತ್ತಿದ್ದ ಬಸ್ಸಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಅರೆಸ್ಟ್

ಮಂಗಳೂರು : ಚಲಿಸುತ್ತಿದ್ದ ಬಸ್ಸಿನಲ್ಲಿ ಕಂಡಕ್ಟರ್ ಓರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ನಡೆದಿದ್ದು, ಕಾಮುಕ ಬಸ್ ನಿರ್ವಾಹಕನನ್ನು ಮಂಗಳೂರು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಬಸ್ ಕಂಡಕ್ಟರ್ ಬಾಗಲಕೋಟೆ ಮೂಲದ ಪ್ರದೀಪ್ (40) ಎಂಬಾತ ಯುವತಿಗೆ…

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣ: ಸಿಸಿಬಿಗೆ ಕಡತ ಹಸ್ತಾಂತರ

ಬೆAಗಳೂರು: ಕರ್ನಾಟಕದ ಮಾಜಿ ಡಿಜಿ ಹಾಗೂ ಐಜಿಪಿ ಒಂ ಪ್ರಕಾಶ್ ಕೊಲೆ ಪ್ರಕರಣ ಸಂಬAಧ ಅವರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿಯನ್ನು ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಪಲ್ಲವಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಕೊಲೆ ನಡೆದ…

ಹಿರ್ಗಾನ ಚಿಕ್ಕಲ್’ಬೆಟ್ಟು ಕ್ರಾಸ್ ಬಳಿ ಕಾರು- ಕೋಳಿ ಸಾಗಾಟದ ಟೆಂಪೋ ಮುಖಾಮುಖಿ ಡಿಕ್ಕಿ: ಕಾರು ಚಾಲಕ ಗಂಭೀರ

ಕಾರ್ಕಳ: ಕೋಳಿ ಸಾಗಾಟದ ಮಿನಿ ಟೆಂಪೋ ಹಾಗೂ ಮಾರುತಿ ಇಕೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ 11.15 ರ ವೇಳೆ ಸಂಭವಿಸಿದೆ. ಕಾರು ಚಾಲಕ ಕಡ್ತಲ ಸಮೀಪದ ಎಳ್ಳಾರೆ ಗ್ರಾಮದ ಶ್ರೀನಿವಾಸ…

ಸ್ಟೇಷನರಿ ಸಾಮಾಗ್ರಿ ನೀಡುವುದಾಗಿ ಬ್ಯಾಂಕ್ ಸಾಲದ ಹಣ ಪಡೆದು ಲಕ್ಷಾಂತರ ರೂ. ವಂಚನೆ: ಕಾರ್ಕಳದ ಕೌಡೂರಿನ ಮಹಿಳೆಗೆ ಪಂಗನಾಮ

ಕಾರ್ಕಳ: ಸ್ಟೇಷನರಿ ಮತ್ತು ಪುಸ್ತಕ ಅಂಗಡಿಯನ್ನು ತೆರೆಯಲು ಕೊಟೇಶನ್ ನೀಡಿ ಬ್ಯಾಂಕಿನಿಂದ ಸಾಲದ ಹಣವನ್ನು ಪಡೆದು ಸ್ಟೇಷನರಿ ವಸ್ತುಗಳನ್ನು ನೀಡದೇ ವಂಚನೆ ಎಸಗಿರುವ ಘಟನೆ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ರಂಗನಪಲ್ಕೆಯಲ್ಲಿ ನಡೆದಿದೆ. ಕೌಡೂರು ನಿವಾಸಿ ಕವಿತಾ ಕೃಪಾಲಿನಿ ಮೋಸಹೋದ ಮಹಿಳೆ.…

ಮುಂಡ್ಕೂರು :ಅಕ್ರಮ ಮರಳು ಸಾಗಾಟ , ಟಿಪ್ಪರ್ ವಶಕ್ಕೆ

ಕಾರ್ಕಳ: ಪೊಲೀಸರು ಮುಂಡ್ಕೂರು ಭಾಗದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ವೇಳೆ ಪರಾರಿಯಾಗಲು ಯತ್ನಿಸಿದ ಟಿಪ್ಪರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಪೊಲೀಸ್ ಸಿಬ್ಬಂದಿ ಸೋಮಪ್ಪ ಬೀಡಿ ಹಾಗೂ ವಿರೂಪಾಕ್ಷಿ ಮುಂಡ್ಕೂರು ಗ್ರಾಮದ ಜಾರಿಗೆಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಸಂಕಲಕರಿಯ…

ಮಣಿಪಾಲ: ಲಾಡ್ಜ್ ಮೇಲೆ ದಾಳಿ : MDMA ಗಾಂಜಾ ವಶ : ಮೂವರು ಅರೆಸ್ಟ್

ಉಡುಪಿ: ಮಣಿಪಾಲ ದಶರಥನಗರದ ಡೌನ್‌ ಟೌನ್‌ ಲಾಡ್ಜ್‌ ಗೆ ದಾಳಿ ನಡೆಸಿದ ಪೊಲೀಸರು, ಮಾದಕವಸ್ತು ಹೊಂದಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾಪು ನಿವಾಸಿ ಮಹಮ್ಮದ್‌ ಅಜರುದ್ದೀನ್‌ ಯಾನೆ ಮಂಚಕಲ್‌ ಅಜರುದ್ದೀನ್‌, ಪುಣೆಯ ರಾಜೇಶ್‌ ಪ್ರಕಾಶ್‌ ಜಾಧವ್‌ ಹಾಗೂ ಮಲ್ಪೆಯ ನಾಜೀಲ್‌ ಯಾನೆ…

ಜಮ್ಮು ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ದಾಳಿ:ಪ್ರವಾಸಿಗರ ಮೇಲೆ ಭೀಕರ ಗುಂಡಿನ ದಾಳಿ: ಶಿವಮೊಗ್ಗದ ವ್ಯಕ್ತಿ ಸೇರಿ 30 ಕ್ಕೂ ಅಧಿಕ ಮಂದಿ ಬಲಿ

ಶ್ರೀನಗರ: ಜಮ್ಮುಕಾಶ್ಮೀರದ ಅನಂತ​ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ದಾಳಿಯಲ್ಲಿ ಶಿವಮೊಗ್ಗದ ಓರ್ವ ಸೇರಿ 30ಕ್ಕೂ ಅಧಿಕ ಪ್ರವಾಸಿಗರು ಬಲಿಯಾಗಿ, 12ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಶಿವಮೊಗ್ಗದ ಉದ್ಯಮಿ ಮಂಜುನಾಥ್​​ ಹಾಗೂ ಬೆಂಗಳೂರಿನ ಭರತ್​ ಭೂಷಣ್…

ಕಾಂತಾವರ: ಮರದಿಂದ ಬಿದ್ದು ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

ಕಾರ್ಕಳ: ಮರದ ಗೆಲ್ಲು ಕಡಿಯಲು ಮರ ಹತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಮರದಿಂದ ಬಿದ್ದು ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಕಾಂತಾವರದ ಕವೈಲ್ ದರ್ಖಾಸ್ ಎಂಬಲ್ಲಿನ ನಿವಾಸಿ ಚಂದ್ರಶೇಖರ(55) ಎಂಬವರು ಮೃತಪಟ್ಟವರು. ಅವರು ಏ.13ರಂದು ತಮ್ಮ…